ಅಮೆರಿಕ ಕಾಂಗ್ರೆಸ್‌ನಲ್ಲಿ ಪಾಕಿಸ್ತಾನ ಭಯೋತ್ಪಾದನೆ ಹೊಣೆಗಾರಿಕೆ ಮಸೂದೆ ಮಂಡನೆ

7

ಅಮೆರಿಕ ಕಾಂಗ್ರೆಸ್‌ನಲ್ಲಿ ಪಾಕಿಸ್ತಾನ ಭಯೋತ್ಪಾದನೆ ಹೊಣೆಗಾರಿಕೆ ಮಸೂದೆ ಮಂಡನೆ

Published:
Updated:
ಅಮೆರಿಕ ಕಾಂಗ್ರೆಸ್‌ನಲ್ಲಿ ಪಾಕಿಸ್ತಾನ ಭಯೋತ್ಪಾದನೆ ಹೊಣೆಗಾರಿಕೆ ಮಸೂದೆ ಮಂಡನೆ

ವಾಸಿಂಗ್ಟನ್ (ಪಿಟಿಐ): ದಶಕಗಳಿಂದ ಭಾರತ ಹಾಗೂ ಅಪ್ಘಾನಿಸ್ತಾನದಲ್ಲಿ ಉಗ್ರರ ಗುಂಪುಗಳನ್ನು ನಿಯಂತ್ರಿಸುವ ಮೂಲಕ ಪಾಕಿಸ್ತಾನವು ದಾಳಿ ನಡೆಸುತ್ತಿದೆ ಎಂದು ಆರೋಪಿಸಿರುವ ಅಮೆರಿಕದ ಕಾನೂನು ಪಂಡಿತರು, ಅಮೆರಿಕದಿಂದ ಪಾಕಿಸ್ತಾನಕ್ಕೆ ದೊರೆಯುವ ನೆರವಿನ ಮೊತ್ತ ಕಡಿತಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ  ಮಸೂದೆಯೊಂದನ್ನು ಮಂಡಿಸಿದ್ದಾರೆ.`ಐಎಸ್‌ಐ ಕೈವಾಡದ ಪರಿಣಾಮವಾಗಿ~ ಇಸ್ಲಾಮಾಬಾದ್‌ನಲ್ಲಿ ಪ್ರತಿಬಾರಿ ಅಮೆರಿಕನ್ ಪ್ರಜೆಗಳ ಹತ್ಯೆ ನಡೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಒದಗಿಸುತ್ತಿರುವ 50 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ಕಡಿತಗೊಳಿಸುವ ಅಂಶಗಳನ್ನು ಈ ಮಸೂದೆ ಒಳಗೊಂಡಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.ವಿದೇಶಾಂಗ ವ್ಯವಹಾರ ಮೇಲ್ವಿಚಾರಣೆ ಹಾಗೂ ತನಿಖೆಗಳ ಉಪಸಮಿತಿಯ ಅಧ್ಯಕ್ಷರಾಗಿರುವ ಡನಾ ರೊಹ್ರಾಬಚರ್ ಅವರು `ಪಾಕಿಸ್ತಾನ ಭಯೋತ್ಪಾದನೆ ಹೊಣೆಗಾರಿಕೆ ಮಸೂದೆ 2012~ ಎಂಬ ಹೊಸ ಮಸೂದೆಯನ್ನು ಶುಕ್ರವಾರ ಕಾಂಗ್ರೆಸ್‌ನಲ್ಲಿ ಮಂಡಿಸಿದರು.ನಂತರ ಮಾತನಾಡಿದ ರೊಹ್ರಾಬಚರ್ ಅವರು `ವಿದೇಶಿ ನೆರವಿನಡಿ ಅಮೆರಿಕವು ಪಾಕಿಸ್ತಾನಕ್ಕೆ ನೀಡುವ 50 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ಕಡಿತಗೊಳಿಸಬೇಕು ಹಾಗೂ ಉಗ್ರರಿಂದ ಹತರಾಗಿರುವ ಅಮೆರಿಕನ್ ಪ್ರಜೆಗಳ ಕುಟುಂಬಕ್ಕೆ 2.2 ಅಮೆರಿಕನ್ ಡಾಲರ್ ಪರಿಹಾರ ನೀಡಬೇಕು~ ಎಂದು ಮನವಿ ಮಾಡಿಕೊಂಡರು.ಇದೇ ವೇಳೆ ಶಾಸನಸಭೆಯು ಪಾಕ್ ಸರ್ಕಾರದ ಮುಖ್ಯಸ್ಥರ ಬೆಂಬಲಿತ ಉಗ್ರರಿಂದ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದಲ್ಲಿ ಹತರಾಗಿರುವ ಅಮೆರಿಕನ್ ಪ್ರಜೆಗಳ ಪಟ್ಟಿ ತಯಾರಿಸುವಂತೆ ರಕ್ಷಣಾ ಇಲಾಖೆಗೆ ಮನವಿ ಮಾಡಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry