ಬುಧವಾರ, ಮೇ 12, 2021
18 °C

ಅಮೆರಿಕ: ತನಿಖೆಯಿಂದ ಆತಂಕ ನಿವಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಎಎಫ್‌ಪಿ): ಸಮೀಪದ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ `ಸಂಶಯಾಸ್ಪದ ವಸ್ತು~ವೊಂದು ಶನಿವಾರ ಸಂಜೆ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ತಜ್ಞರು ಕೂಲಂಕಷವಾಗಿ ತನಿಖೆ ನಡೆಸಿ ನಂತರ ಆತಂಕ ನಿವಾರಿಸಿದರು.`ಶನಿವಾರ ಸಂಜೆ ಸುಮಾರು 4.30ಕ್ಕೆ ವಿಮಾನ ನಿಲ್ದಾಣದಲ್ಲಿ `ವಸ್ತು~ವೊಂದು ಪತ್ತೆಯಾಗಿತ್ತು. ಈ ಕಾರಣದಿಂದ ನಿಲ್ದಾಣದಲ್ಲಿ ಸರಕುಗಳನ್ನು ತುಂಬಿದ್ದ ಕಂಟೈನರ್ ಇದ್ದ ಪ್ರದೇಶದ ಸುತ್ತ ಇದ್ದ ಜನರನ್ನು ತೆರವುಗೊಳಿಸಲಾಗಿತ್ತು~ ಎಂದು ಡಲ್ಲೆಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ರಾಬರ್ಟ್ ಯಿಂಗ್ಲಿಂಗ್ ಹೇಳಿದ್ದಾರೆ.ತೆರವು ಗೊಳಿಸಿದ ಪ್ರದೇಶದಲ್ಲಿದ್ದ ನಿಲ್ದಾಣದ `ಬಿ~ ಅಂಗಳದಲ್ಲಿ ಕೆಲವು ಗೇಟ್‌ಗಳು ಇದ್ದಿದ್ದರಿಂದ ತಪಾಸಣೆಗಾಗಿ ನಾಲ್ಕು ಗಂಟೆಗಳ ಕಾಲ ಅವುಗಳನ್ನು ಮುಚ್ಚಲಾಗಿತ್ತು ಎಂದು ಯಿಂಗ್ಲಿಂಗ್ ತಿಳಿಸಿದ್ದಾರೆ.

9/11 ದಾಳಿಯ ಹತ್ತನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸಂಭಾವ್ಯ ಉಗ್ರರ ದಾಳಿಯನ್ನು ತಡೆಯಲು ಮುನ್ನೆಚ್ಚರಿಕೆಯಾಗಿ ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.