ಅಮೆರಿಕ ದಿಗ್ಬಂಧನ

7

ಅಮೆರಿಕ ದಿಗ್ಬಂಧನ

Published:
Updated:

ವಾಷಿಂಗ್ಟನ್ (ಪಿಟಿಐ): ಭಯೋತ್ಪಾದನೆಗೆ ಬೆಂಬಲ, ಸಿರಿಯಾ ಹಿಂಸಾಚಾರದಲ್ಲಿ ಭಾಗಿಯಾಗಿರುವುದು ಹಾಗೂ ತನ್ನದೇ ರಾಷ್ಟ್ರದ ನಾಗರಿಕರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ದೂರುಗಳನ್ನು ಮುಂದಿಟ್ಟು ಇರಾನಿನ ಗುಪ್ತಚರ ಮತ್ತು ಭದ್ರತಾ ಸಚಿವಾಲಯದ ಮೇಲೆ ಅಮೆರಿಕವು ಶುಕ್ರವಾರ ದಿಗ್ಬಂಧನ ಹೇರಿದೆ.ಅಮೆರಿಕದ ಕಂದಾಯ ಇಲಾಖೆಯು ಹೇಳಿಕೆಯೊಂದನ್ನು ಹೊರಡಿಸಿದ್ದು, ಜಾಗತಿಕ ಭಯೋತ್ಪಾದಕರ ವಿಶೇಷ ಪಟ್ಟಿಯಲ್ಲಿ ಇರಾನಿನ ಪ್ರಾಥಮಿಕ ಗುಪ್ತಚರ ಸಂಸ್ಥೆ `ಎಂಒಐಎಸ್~ ಅನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಭಯೋತ್ಪಾದನೆ ಮತ್ತು ಆರ್ಥಿಕ ಗುಪ್ತಚರ ಸಂಸ್ಥೆಯ ಅಧೀನ ಕಾರ್ಯದರ್ಶಿ ಡೇವಿಡ್ ಎಸ್ ಕೊಹೆನ್ ಹೇಳಿದ್ದಾರೆ.ಅಮೆರಿಕದ ಯಾವುದೇ ಪ್ರಜೆ ಎಂಒಐಎಸ್‌ನೊಂದಿಗೆ ವ್ಯವಹರಿಸುವಂತಿಲ್ಲ ಎಂದೂ ಹೇಳಿಕೆ ತಿಳಿಸಿದೆ. ಈ ಕ್ರಮದಿಂದಾಗಿ ಎಂಒಐಎಸ್‌ನ ಯಾವುದೇ ವ್ಯಕ್ತಿ ಅಮೆರಿಕದ ವಿದೇಶಾಂಗ ಇಲಾಖೆಯಿಂದ ವೀಸಾ ಪಡೆಯುವುದು ಅಸಾಧ್ಯವಾಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry