ಅಮೆರಿಕ ಪೂರ್ವಏಷ್ಯಾ ನೀತಿಯಲ್ಲಿ ಭಾರತ ಸೇರಲಿ

7

ಅಮೆರಿಕ ಪೂರ್ವಏಷ್ಯಾ ನೀತಿಯಲ್ಲಿ ಭಾರತ ಸೇರಲಿ

Published:
Updated:

ವಾಷಿಂಗ್ಟನ್ (ಪಿಟಿಐ): ಜಾಗತಿಕವಾಗಿ ಚೀನಾದ ಪ್ರಭಾವವನ್ನು ಮಿತಗೊಳಿಸುವ ಅಮೆರಿಕದ ಪ್ರಯತ್ನದಲ್ಲಿ ಭಾರತದ ತಂತ್ರಗಾರಿಕೆಯ ಮಹತ್ವವನ್ನು ಪ್ರತಿಪಾದಿಸಿರುವ ಮಾಜಿ ಉನ್ನತ ರಾಜತಾಂತ್ರಿಕರೊಬ್ಬರು, `ಅಮೆರಿಕವು ತನ್ನ ಪೂರ್ವ ಏಷ್ಯಾ ನೀತಿಯಲ್ಲಿ ಭಾರತವನ್ನು ಸೇರಿಸಿಕೊಳ್ಳಬೇಕು~ ಎಂದು ಸಲಹೆ ಮಾಡಿದ್ದಾರೆ.ಈ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಅವರ ಆಡಳಿತದಲ್ಲಿ ವಿದೇಶಾಂಗ ರಾಜಕೀಯ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿಯಾಗಿದ್ದ ಮತ್ತು ನಾಗರಿಕ ಪರಮಾಣು ಒಪ್ಪಂದದಲ್ಲಿ ಭಾರತದ ಜತೆ4 ಸಮಾಲೋಚಿಸಲು ಪ್ರಮುಖ ಪ್ರತಿನಿಧಿಯಾಗಿದ್ದ ನಿಕೋಲಸ್  ಬರ್ನ್ಸ್ ಅವರು `ದಿ ಬೋಸ್ಟನ್ ಗ್ಲೋಬ್~ನಲ್ಲಿ ಲೇಖನವೊಂದನ್ನು ಬರೆದಿದ್ದಾರೆ.ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಅಮೆರಿಕದ 50 ವರ್ಷಗಳ ಪ್ರಾಬಲ್ಯಕ್ಕೆ ಸವಾಲೊಡ್ಡಿರುವ ಚೀನಾಕ್ಕೆ ಜಾಣತನದಿಂದ ಪ್ರತಿಕ್ರಿಯೆ ನೀಡಿರುವ ಈಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಜಪಾನ್ ಮತ್ತು ದಕ್ಷಿಣ ಕೊರಿಯಾ ಜೊತೆಗಿನ ಮೈತ್ರಿಗೆ ಪುನಶ್ಚೇತನ ನೀಡಿದ್ದಾರೆ ಎಂದು ಬರ್ನ್ಸ್ ಅಭಿಪ್ರಾಯ ಪಟ್ಟಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry