ಶನಿವಾರ, ಮೇ 8, 2021
26 °C

ಅಮೆರಿಕ: ಪ್ರಧಾನಿ ಸಿಂಗ್ ಪುತ್ರಿಗೆ ವಿಶೇಷ ಸಾಧನೆ ಪುರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಮಾನವ ಹಕ್ಕುಗಳ ಕಾನೂನು ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಹಾಗೂ ಕಾನೂನು ಹೋರಾಟಗಾರ್ತಿ ಅಮೃತಾ ಸಿಂಗ್ ಅವರಿಗೆ ಅಮೆರಿಕದ ಸಂಸ್ಥೆ ಯೊಂದು `2012ನೇ ವಿಶೇಷ ಸಾಧನೆ' ಪುರಸ್ಕಾರ ನೀಡಿ ಗೌರವಿಸಿದೆ.ಇಲ್ಲಿನ `ಇಂಡಿಯಾ ಅಬ್ರಾಡ್ ಪಬ್ಲೀಷರ್ಸ್‌' ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ಭಾರತೀಯ ಮೂಲದ ವೃತ್ತಿಪರ ಸಾಧಕರ ಸನ್ಮಾನ ಸಮಾರಂಭದಲ್ಲಿ ಅಮೃತಾ ಅವರಿಗೆ `2012ನೇ ವಿಶೇಷ ಸಾಧನೆ'  ಪುರಸ್ಕಾರ ನೀಡಿ ಗೌರವಿಸಲಾಯಿತು.ಸಿಂಗ್ ಅವರ ಕೊನೆಯ ಪುತ್ರಿಅಮೃತಾ ಸಿಂಗ್ (43), ನ್ಯೂಯಾರ್ಕ್ ಮೂಲದ `ಒಪನ್ ಸೊಸೈಟಿ ಜಸ್ಟಿಸ್ ಇನಿಷಿಯೇಟಿವ್'ನಲ್ಲಿ ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ನಿಗ್ರಹದ ಹಿರಿಯ ಕಾನೂನು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.`ಒಪನ್ ಸೊಸೈಟಿ ಜಸ್ಟಿಸ್ ಇನಿಷಿಯೇಟಿವ್' ಫೆಬ್ರುವರಿಯಲ್ಲಿ ಪ್ರಕಟಿಸಿದ್ದ ಅಮೃತಾ ಅವರ, `ಗ್ಲೋಬಲಿ ಟಾರ್ಚರ್: ಸಿಐಎ ಸಿಕ್ರೇಟ್ ಟಾರ್ಚರ್ ಅಂಡ್ ಎಕ್ಸ್‌ಟ್ರಾರ್ಡಿನರಿ ರೆಂಡಿಷನ್' (ಜಾಗತಿಕ ಚಿತ್ರಹಿಂಸೆ: ಸಿಐಎ ರಹಸ್ಯ ಚಿತ್ರಹಿಂಸೆ ಮತ್ತು ಅಸಾಮಾನ್ಯ ಚಿತ್ರಣ) ವರದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಲ್ಲದೆ, ಜಾಗತಿಕ ಚಿತ್ರಹಿಂಸೆ ಜಾಲ ಕುರಿತು ಭಾರಿ ಚರ್ಚೆಗೆ ಗ್ರಾಸವಾಗಿತ್ತು.ಇದೇ ವೇಳೆ, ಭಾರತೀಯ ಮೂಲದ ಇತರೆ ಸಾಧಕರಾದ ಸಂಸದ ಅಮಿ ಬೆರಾ ಮತ್ತು ಅಮೆರಿಕ ಸಹಾಯಧನ ಸಮಿತಿಯ (ಯುಎಸ್‌ಎಐಡಿ) ಮುಖ್ಯಸ್ಥ ರಾಜೀವ್ ರಾಜ್ ಷಾ ಅವರನ್ನು ಕೂಡ ಗೌರವಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.