ಅಮೆರಿಕ ಮೈತ್ರಿ ರಾಷ್ಟ್ರಗಳ ಸಾಕ್ಷ್ಯ: ರಷ್ಯಾ ಅತೃಪ್ತಿ

7

ಅಮೆರಿಕ ಮೈತ್ರಿ ರಾಷ್ಟ್ರಗಳ ಸಾಕ್ಷ್ಯ: ರಷ್ಯಾ ಅತೃಪ್ತಿ

Published:
Updated:

ಮಾಸ್ಕೊ (ಎಎಫ್‌ಪಿ): ಡಮಾಸ್ಕಸ್‌ನ ಹೊರವಲಯದಲ್ಲಿ ಸಿರಿಯಾ ಸರ್ಕಾರ ರಾಸಾಯನಿಕ ಅಸ್ತ್ರಗಳಿಂದ ದಾಳಿ ನಡೆಸಿದೆ ಎಂಬ ಆರೋಪಗಳ ಬಗ್ಗೆ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ನೀಡಿರುವ ಸಾಕ್ಷ್ಯಗಳಿಂದ ರಷ್ಯಾವು ತೃಪ್ತಿ ಹೊಂದಿಲ್ಲ ಎಂದು ವಿದೇಶಾಂಗ ಸಚಿವ ಸರ್ಗಿ ಲಾವ್‌ರೊವ್ ಹೇಳಿದ್ದಾರೆ.ಬಷರ್ ಅಲ್-ಅಸಾದ್ ನೇತೃತ್ವದ ಸಿರಿಯಾದ ಮೇಲೆ ಸೇನಾ ಕಾರ್ಯಾಚರಣೆ ನಡೆಸುವ ಅಮೆರಿಕ ನೇತೃತ್ವದ ಮಿತ್ರ ಪಡೆಗಳ ಯೋಜನೆಯನ್ನು ರಷ್ಯಾ ತೀವ್ರವಾಗಿ ವಿರೋಧಿಸುತ್ತಿದೆ.`ಅಮೆರಿಕದ ಪಾಲುದಾರರು, ಬ್ರಿಟನ್ ಹಾಗೂ ಫ್ರಾನ್ಸ್ ನೀಡುತ್ತಿರುವ ಹೇಳಿಕೆಗಳು, ಸಾಕ್ಷ್ಯಗಳಿಂದ ನಾವು ತೃಪ್ತಿ ಹೊಂದಿಲ್ಲ' ಎಂದು  ಮಾಸ್ಕೊದ ವಿಶ್ವವಿದ್ಯಾಲಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಲಾವ್‌ರೊವ್ ಹೇಳಿದ್ದಾರೆ.ಗುಪ್ತಚರ ನೌಕೆ ಸಿರಿಯಾ ಕರಾವಳಿಗೆ: ಈ ನಡುವೆ, ಶತ್ರು ಪಾಳಯವನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿರುವ ಗುಪ್ತಚರ ನೌಕೆಯನ್ನು ರಷ್ಯಾವು ಸಿರಿಯಾ ಕರಾವಳಿಗೆ ಕಳುಹಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.ಸಾಕ್ಷ್ಯ ನೀಡುವೆ- ಫ್ರಾನ್ಸ್ ಹೇಳಿಕೆ: ಸಿರಿಯಾ ಆಡಳಿತವೇ ಡಮಾಸ್ಕಸ್‌ನಲ್ಲಿ ವಿನಾಶಕಾರಿ ರಾಸಾಯನಿಕ ದಾಳಿ ನಡೆಸಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯ ನೀಡುವುದಾಗಿ ಫ್ರಾನ್ಸ್ ಸೋಮವಾರ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry