ಅಮೆರಿಕ ಯುವಕನಿಂದ 30 ಜನರ ಹತ್ಯೆ

7

ಅಮೆರಿಕ ಯುವಕನಿಂದ 30 ಜನರ ಹತ್ಯೆ

Published:
Updated:

ನ್ಯೂಯಾರ್ಕ್ (ಐಎಎನ್‌ಎ/ಪಿಟಿಐ): ಶಾಲೆಯೊಂದಕ್ಕೆ ನುಗ್ಗಿದ ಯುವಕನೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಆತನ ತಾಯಿ ಸೇರಿ 30 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ 20 ಮಕ್ಕಳು ಸೇರಿದ್ದಾರೆ.ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿನ ಸ್ಯಾಂಡಿ ಹೂಕ್ ಎಲಿಮೆಂಟರಿ ಸ್ಕೂಲ್‌ನ ತರಗತಿ ಕೋಣೆಗೆ ಏಕಾಏಕಿ ನುಗ್ಗಿದ 20ರ ಹರೆಯದ ರ‌್ಯಾನ್ ಲಾಂಜಾ ಎಂಬಾತನು ಮೊದಲು ತನ್ನ ತಾಯಿಯ ಮೇಲೆ ಗುಂಡು ಹಾರಿಸಿದ್ದಾನೆ.ಬಳಿಕ ವಿದ್ಯಾರ್ಥಿಗಳತ್ತ ಗುಂಡು ಹಾರಿಸಿದನಲ್ಲದೇ, ಕೊನೆಗೆ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾಂಜಾ ತಾಯಿ ಈ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಸ್ಥಳದಿಂದ 9ಎಂಎಂ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry