ಅಮೆರಿಕ ರಾಜತಾಂತ್ರಿಕನ ಭವಿಷ್ಯ ಕೋರ್ಟ್ ಕೈಯಲ್ಲಿ

7

ಅಮೆರಿಕ ರಾಜತಾಂತ್ರಿಕನ ಭವಿಷ್ಯ ಕೋರ್ಟ್ ಕೈಯಲ್ಲಿ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿನ ಅವೆುರಿಕ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರ ವಿರುದ್ಧ ಕೊಲೆ ಮೊಕದ್ದಮೆ ದಾಖಲಾಗಿರುವ ಹಿನ್ನೆಲೆಯಲ್ಲಿ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಬಿಗುವಿನಿಂದ ಕೂಡಿರುವ ಬೆನ್ನಲ್ಲೇ, ಆ ರಾಜತಾಂತ್ರಿಕ ಅಧಿಕಾರಿಯ ಭವಿಷ್ಯವನ್ನು ನ್ಯಾಯಾಲಯ ಅಥವಾ ಸತ್ತವರ ಕುಟುಂಬದವರು ತೀರ್ಮಾನಿಸುತ್ತಾರೆ ಎಂದು ಪ್ರಧಾನಿ ಯೂಸುಫ್ ರಜಾ ಗಿಲಾನಿ ಸ್ಪಷ್ಟಪಡಿಸಿದ್ದಾರೆ.ಕೊಲೆ ಆರೋಪದ ಮೇಲೆ ಬಂಧಿಸಲಾಗಿರುವ ರಾಜತಾಂತ್ರಿಕ ಅಧಿಕಾರಿ ರೇಮಂಡ್ ಡೇವಿಸ್ ಎಂಬ ಅಧಿಕಾರಿಗೆ ರಾಜತಾಂತ್ರಿಕ ಸಿಬ್ಬಂದಿಗೆ ನೀಡುವ ವಿನಾಯಿತಿಯನ್ನು ಕೊಡಬೇಕು ಎಂದು ಅಮೆರಿಕ ಒತ್ತಾಯಿಸಿದೆ.ಜತೆಗೆ ಕ್ರಿಮಿನಲ್ ಮೊಕದ್ದಮೆ ಅನ್ವಯ ಅವರ ವಿರುದ್ಧ ತನಿಖೆ ನಡೆಸುವುದಾಗಿಯೂ ಸ್ಪಷ್ಟಪಡಿಸಿದೆ.ಈ ವಿಚಾರದಲ್ಲಿ ಮಾತುಕತೆ ನಡೆಸಿಸಲು ಸೆನೆಟ್‌ನ ವಿದೇಶಾಂತ ವ್ಯವಹಾರ ಸಮಿತಿ ಅಧ್ಯಕ್ಷ ಜಾನ್ ಕೆರ್ರಿ ಅವರನ್ನು ಒಬಾಮ ಆಡಳಿತ ಪಾಕಿಸ್ತಾನಕ್ಕೆ ಕಳುಹಿಸಿದೆ. ಚರ್ಚೆ ಸಂದರ್ಭದಲ್ಲಿ ಗಿಲಾನಿ ಅವರು, ಡೇವಿಸ್ ಬಂಧನದ ವಿಷಯ ದ್ವಿಪಕ್ಷೀಯ ಮಾತುಕತೆಗೆ ಅಡ್ಡಿಯಾಗಬಾರದು ಎಂದು ಹೇಳಿದ್ದಾರೆ. ಡೇವಿಸ್ ಬಿಡುಗಡೆಗೆ ಒಬಾಮ ಪ್ರಥಮ ಬಾರಿ ಮಧ್ಯೆಪ್ರವೇಶಿಸಿದ ನಂತರ ಗಿಲಾನಿ ಈ ಹೇಳಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry