ಅಮೆರಿಕ ರಾಜತಾಂತ್ರಿಕರ ಪಾದಯಾತ್ರೆ

7

ಅಮೆರಿಕ ರಾಜತಾಂತ್ರಿಕರ ಪಾದಯಾತ್ರೆ

Published:
Updated:

ಮುಂಬೈ (ಐಎಎನ್‌ಎಸ್):  ಭಾರತದಲ್ಲಿರುವ ಬಡವರಿಗೆ ನೆರವು ನೀಡುವ ಉದ್ದೇಶದಿಂದ ನಿಧಿ ಸಂಗ್ರಹಿಸಲು ಮುಂಬೈನಲ್ಲಿರುವ ಅಮೆರಿಕ ಕಾನ್ಸುಲ್ ಕಚೇರಿಯ ನಾಲ್ವರು ರಾಜತಾಂತ್ರಿಕರು ಎರಡು ದಿನಗಳಲ್ಲಿ ನೂರು ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದಾರೆ.ಫೆ.10ರಂದು ಶುಕ್ರವಾರ ಪಾದಯಾತ್ರೆ ಕಾವೇರಿ ಸಂಗಮದಿಂದ ಆರಂಭವಾಗಿ ದಕ್ಷಿಣ ಬೆಂಗಳೂರಿನ ಹಳ್ಳಿಗಳ ಮೂಲಕ ಹಾಯ್ದು ಬಿಡದಿಯಲ್ಲಿ ಕೊನೆಗೊಳ್ಳಲಿದೆ.ಈ ಹಿಂದೆ ಅಮೆರಿಕದಲ್ಲಿ ನಡೆದ `ಪಾಲ್ ರಿವರ್ಸ್ ಮಿಡ್‌ನೈಟ್ ವಾಕ್~ ಮಾದರಿಯಲ್ಲಿ ಈ ಪಾದಯಾತ್ರೆ ನಡೆಯಲಿದೆ.  `ಆಕ್ಸ್‌ಫಾಮ್ ಇಂಡಿಯಾ~ ಸಂಸ್ಥೆಯ ಪರವಾಗಿ ಅಮೆರಿಕ ರಾಜತಾಂತ್ರಿಕರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಆಕ್ಸ್‌ಫಾಮ್ ಟ್ರಯಲ್‌ವಾಕರ್~ 12 ದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry