ಗುರುವಾರ , ಮೇ 19, 2022
21 °C

ಅಮೆರಿಕ: ಹಿಂದೂ ಗುರು ಬಂಧನಕ್ಕೆ ವಾರೆಂಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್, (ಪಿಟಿಐ): ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಶಿಕ್ಷೆಗೆ ಗುರಿಯಾಗಿರುವ ಹಿಂದೂ ಗುರು ಪ್ರಕಾಶಾನಂದ ಸರಸ್ವತಿ ನಿಗದಿತ ಸಮಯಕ್ಕೆ ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ ಆತನ ಬಂಧನಕ್ಕೆ ಕೋರ್ಟ್ ವಾರೆಂಟ್ ಹೊರಡಿಸಿದೆ.ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ನಿರ್ಧರಿಸಿದ್ದ ನ್ಯಾಯಾಲಯ ಆಪಾದಿತನಿಗೆ ನ್ಯಾಯಲಯದ ಮುಂದೆ ಹಾಜರಾಗಲು ಸೂಚಿಸಿತ್ತು.ಆದರೆ ನಿಗದಿತ ಸಮಯ ಮೀರಿದರೂ ಆತ ಹಾಜರಾಗದ ಕಾರಣ ಬಂಧನದ ವಾರೆಂಟ್ ಹೊರಡಿಸಿದ ಜಿಲ್ಲಾ ನ್ಯಾಯಾಧೀಶ ಕಾರ್ಲಸ್ ರಾಮ್ಸೆ, ಜತೆಗೆ ಜಾಮೀನನ್ನೂ ರದ್ದುಪಡಿಸಿದ್ದಾರೆ. ಆಪಾದಿತನ ಪಾಸ್‌ಪೋರ್ಟ್ ನ್ಯಾಯಾಲಯದಲ್ಲಿರುವದರಿಂದ ಆತ ದೇಶ ತೊರೆಯುವ ಸಾಧ್ಯತೆ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.