ಅಮೇರ್ ನಿಷೇಧ ಶಿಕ್ಷೆ ಹೆಚ್ಚಳ ಸಾಧ್ಯತೆ

ಗುರುವಾರ , ಜೂಲೈ 18, 2019
28 °C

ಅಮೇರ್ ನಿಷೇಧ ಶಿಕ್ಷೆ ಹೆಚ್ಚಳ ಸಾಧ್ಯತೆ

Published:
Updated:

ಲಂಡನ್ (ಪಿಟಿಐ): ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೇರ್ ಅವರು ನಿಯಮ ಉಲ್ಲಂಘಿಸಿರುವುದು ಸಾಬೀತಾದರೆ ಈಗಾಗಲೇ ಐಸಿಸಿ ವಿಧಿಸಿರುವ ಐದು ವರ್ಷದ ನಿಷೇಧ ಶಿಕ್ಷೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ. ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಕಾರಣ ನಿಷೇಧ ಶಿಕ್ಷೆ ಎದುರಿಸುತ್ತಿರುವ ಅವರು ಇತ್ತೀಚೆಗೆ ಇಂಗ್ಲೆಂಡ್‌ನ ಸರ‌್ರೆ ಕ್ರಿಕೆಟ್ ಲೀಗ್‌ನ ಒಂದನೇ ಡಿವಿಷನ್ ಪಂದ್ಯದಲ್ಲಿ ಆಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಈಗ ವಿಚಾರಣೆ ನಡೆಸುತ್ತಿದೆ.`ಅದೊಂದು ಅಧಿಕೃತ ಪಂದ್ಯವಾಗಿತ್ತು~ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿರುವುದು ಅಮೇರ್ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry