ಅಮ್ಮ ಪ್ರಶಸ್ತಿಗೆ ಕೃತಿಗಳ ಆಹ್ವಾನ

7

ಅಮ್ಮ ಪ್ರಶಸ್ತಿಗೆ ಕೃತಿಗಳ ಆಹ್ವಾನ

Published:
Updated:

ಗುಲ್ಬರ್ಗ: ಜಿಲ್ಲೆಯ ಸೇಡಂನ ಮಾತೋಶ್ರಿ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ನೀಡುವ 12ನೇ ವರ್ಷದ `ಅಮ್ಮ ಪ್ರಶಸ್ತಿ~ಗೆ 2011-12ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ.

ಸಾಹಿತ್ಯದ ಯಾವುದೇ ಪ್ರಕಾರದ ಕೃತಿಯ ಎರಡು ಪ್ರತಿಗಳನ್ನು ಕಳುಹಿಸಬಹುದು. ಕೃತಿ ಸ್ವೀಕರಿಸಲು ನವೆಂಬರ್ 5 ಕೊನೆಯ ದಿನಾಂಕ. ಆಯ್ದ ಕೃತಿಗಳಿಗೆ ತಲಾ ರೂ 5 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.ವಿಳಾಸ
: ರತ್ನಕಲಾ ಮುನ್ನೂರ್, ಸಂಚಾಲಕಿ, ಮಾತೋಶ್ರಿ ಮಹಾದೇವಮ್ಮ ಮುನ್ನೂರ್ ಪ್ರತಿಷ್ಠಾನ, `ಅಮ್ಮ ನಿಲಯ~, ರಾಮಚಂದ್ರ ಲೇಔಟ್, ಜಿ.ಕೆ.ಕ್ರಾಸ್, ಊಡಗಿ ರಸ್ತೆ, ಸೇಡಂ-585222, ಗುಲ್ಬರ್ಗ ಜಿಲ್ಲೆ. ಮೊಬೈಲ್: 97316 66052 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry