ಅಯ್ಯೋ ನನ್ ತಪ್ಪೇನು?

7

ಅಯ್ಯೋ ನನ್ ತಪ್ಪೇನು?

Published:
Updated:

`ನಾನು ಹುಣ್ಸೆಮರ. ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದ್ಲ್ಲಲಿರೋದು. ನನ್ಗೆ ಸುಮಾರು 165 ರಿಂದ 170 ವರ್ಷ ವಯಸ್ಸಾಗಿದೆ. ಇಷ್ಟು ವರ್ಷ ಕಾಪಾಡಿಕೊಂಡು ಬಂದ ನನ್ನ `ಶರೀರ'ದ ಮೇಲೆ ಇ್ಲ್ಲಲಿನ ಜನರ ಕಣ್ಬಿದ್ದಿದೆ. ನನ್ನ ಕೊಂಬೆಗಳನ್ನ ಕಡಿಯೋಕೆ ಶುರು ಹಚ್‌ಕೊಂಡಿದ್ದಾರೆ.ಇನ್ನು ನಾನು ಇರುವ ಸಮೀಪನೇ ಇರೋ ಅರಳಿ ಮರ ನೋಡಿ. ಅವನೇ ಪುಣ್ಯವಂತ. ಅವನ್ಗೂ ಸುಮಾರು ನನ್ನಷ್ಟೇ ವಯಸ್ಸು. ದೇವಸ್ಥಾನದ ಹತ್ರ ಇರೋದ್ರಿಂದ ಪ್ರತಿದಿನ ಪೂಜೆ, ಪುನಸ್ಕಾರ ನಡಿತಿರ್ತದೆ. ದೇವ್ರನ್ನ ಪೂಜೆ ಮಾಡಿ ಬರೋರು ಅವನ್ಗೂ ಭಕ್ತಿಯಿಂದ ಕೈ ಮುಗೀತಾರೆ. ಆದ್ರೆ ನನ್ ಪರಿಸ್ಥಿತಿ ಮಾತ್ರ ಅಯ್ಯೋ ದೇವ್ರೆ...ನನ್ ಬಳಿ ಸಾಕಷ್ಟು ಹಕ್ಕಿಗಳು ವಾಸಮಾಡ್ತ ಇದ್ದಾವೆ. ಜನರಿಗೂ ನನ್ನಿಂದ ಬಿಸಿಲು, ಮಳೆಯಿಂದ ರಕ್ಷಣೆ ಬೇಕು. ಆದ್ರೆ ನನಗ್ಮಾತ್ರ ಯಾರಿಂದಲೂ ಒಂದು ಚೂರು ನೆರವು ಅನ್ನೋದೆ ಇಲ್ಲ ನೋಡಿ. ನೆರವು ನೀಡೋದ್ ಬೇಡ, ನನ್ ಪಾಡಿಗೆ ಹಾಗೇ ಬಿಟ್ರೆ ಸಾಕು. ಹೇಗೋ ಬದ್ಕೋತೇನೆ.ಎರಡು ಮಂದಿ ಒಂದೇ ಬಾರಿಗೆ ಒಳಗೆ ಹೋಗಬಹುದಾದಷ್ಟು ದೊಡ್ಡ ಪೊಟರೆ ಇರೋದು ನನ್ ವಿಶೇಷ. ಅಲ್ಲದೆ ಒಬ್ಬ ಸುಮಾರು 15 ಅಡಿ ಎತ್ತರಕ್ಕೆ ಸುಲಭವಾಗಿ ಪೊಟರೆಯೊಳಗಿನಿಂದಲೇ ಹೋಗಬಹುದು. ಇದ್ರಿಂದ ಎಷ್ಟೇ ಭೋರ್ಗರೆವ ಮಳೆ ಬಂದ್ರೂ ಒಂದು ಹನಿ ನೀರು ಸಹ ಅವರ ಮೈ ಸೋಕೋದಿಲ್ಲ.ನನ್ಗೆ ವಯಸ್ಸಾಗಿದೆ ನಿಜ. ಹಾಗಂತ ಫಲ ಬಿಡೋದನ್ನ ನ್ಲ್ಲಿಲಿಸಿಲ್ಲ. ಪ್ರತಿವರ್ಷ ಮೈ ತುಂಬ ಫಲ ಕೊಡ್ತೇನೆ. ಇಷ್ಟು ವಯಸ್ಸಾದ್ರೂ ಒಬ್ರು ಸಹ ಕರುಣೆ ತೋರಲ್ವೆ. ಅದೂ ಬೇಡ, ಇ್ಲ್ಲಲಿನ ವಯಸ್ಸಾದ ಜನ್ರುಗುನೂ ಸಹ ನನ್ ಕಂಡ್ರೆ ಅಷ್ಟಕಷ್ಟೆ.   ಈತನಕ ಬರಿ ಕೊಂಬೆಗಳಿಗೆ ಕೊಡ್ಲಿ ಹಾಕ್ತಿದ್ದಾರೆ, ಆದ್ರೆ ಯಾವಾಗ ನನ್ ಬುಡಕ್ಕೆ ಕೊಡ್ಲಿ ಹಾಕಿ ಉರುಳಿಸ್ತಾರೋ ಗೊತ್ತಿಲ್ಲ. ಇಂಥ ಭಯದ್ಲ್ಲಲಿದ್ರೂ ನಾನು ಯಾರಿಗೂ ತೊಂದ್ರೆಯಂತೂ ನೀಡೋಲ್ಲ. ತೊಂದ್ರೆ ನೀಡುವ ಸ್ವಭಾವದವನು ನಾನಲ್ಲ. `ನೀವು ಎಷ್ಟೆ ತೊಂದ್ರೆ ಕೊಟ್ರು, ಪರರ ಉಪಕಾರವೇ ನನ್ನ ಧ್ಯೇಯ' ಎಂದು ನಿಂತಿರ‌್ತೇನೆ.ನನಗೂ 200 ವರ್ಷ ಪೂರೈಸಬೇಕೆಂಬ ಆಸೆ. ಈ ಆಸೆ ಈಡೇರುತ್ತೊ, ಇಲ್ವೋ. ನೀವ್ ಮಾತ್ರ `ನಾನು ನೂರು ವರ್ಷ ಬದಕ್ಬೇಕು ಅಂತ್ತಿರಾ' ಆ ಆಸೆ ನನಗಿಲ್ವ. ನೀವು ನನ್ಪಾಡಿಗೆ ನನ್ ಬಿಡಿ. ದ್ವಿಶತಕ ಬಾರಿಸುತ್ತೇನೆ. ಜೊತೆಗೆ ನಿಮಗೂ ನೆರಳಾಗಿರ‌್ತೆನೆ. ` ಲೋ ಈ ಮರ್ದ್ಲಲಿ ದೆವ್ವ ಇದೆ. ಹೇಗಾದ್ರು ಮಾಡಿ ಇದನ್ನ ಒಣಗಿಸ್ಬೇಕು, ಊರತ್ರ ಇರೋದು ಸರಿಯಲ್ಲ' ಎಂದು ಎಷ್ಟೋ ಮಂದಿ ನನ್ನ್ ಬಳಿ ಮಾತಾಡ್ತಾರೆ. ದಯವಿಟ್ಟು ಒಣಗಿಸುವಂತ್ತ ಕೆಲ್ಸ ಮಾತ್ರ ಮಾಡ್ಬೇಡಿ. ನಾನೇನು ದೆವ್ವ ಭೂತಗಳಿಗೆ ಇರೋಕೆ ಜಾಗ ಕೊಟ್ಟು, ನಿಮಗೆ ತೊಂದ್ರೆ ನೀಡುವಂತಹ ಕಟುಕ ನಾನಲ್ಲ. ಇಷ್ಟು ವರ್ಷಗಳ ಕಾಲ ನಿಮಗಾಗಿಯೇ ಜೀವ ಸವೆಸಿದೆ. ಮುಂದೇನೂ ಹಾಗೆಯೇ. ಇದು ನಿಮಗೆ ಹೆಮ್ಮೆ ಅನಿಸ್ತಿಲ್ವೆ.ನಿಮ್ಮ ನೆರಳಾಗಿರುವ  `ಹುಣ್ಸೆ ಮರ'

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry