ಸೋಮವಾರ, ಅಕ್ಟೋಬರ್ 14, 2019
28 °C

ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ

Published:
Updated:

ಯಲ್ಲಾಪುರ: ತಾಲ್ಲೂಕಿನ ಮದನೂರು ಪಂಚಾಯಿತಿ ವ್ಯಾಪ್ತಿಯ ಹವಾಲ್ದಾ ರಂಗಿ ಗ್ರಾಮದಲ್ಲಿ 30 ಕ್ಕೂ ಹೆಚ್ಚು  ವರ್ಷದಿಂದ ಅರಣ್ಯ ಅತಿಕ್ರಮಣ ಮಾಡಿಕೊಂಡಿದ್ದ ಮೂವರು ರೈತರ ಗದ್ದೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಬಳಸಿ ಕಾಲುವೆ ತೆಗೆದಿದ್ದು ಗ್ರಾಮದ ರೈತರ ಆಕ್ರೋಷಕ್ಕೆ ಕಾರಣ ವಾಗಿದೆ.ಸದಾನಂದ ದೇಸಾಯಿ, ಗಂಗಾಧರ ದೇಸಾಯಿ ಹಾಗೂ ಪಾರ್ವತಿ ದೇಸಾಯಿ ಕಳೆದ 30 ವರ್ಷದಿಂದ ಅರಣ್ಯ ಅತಿಕ್ರಮಣ ಮಾಡಿ ಭೂಮಿ ಯನ್ನು ಸಾಗುವಳಿ ಮಾಡಿಕೊಂಡಿದ್ದು, ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಭೂಮಿ ಸಕ್ರಮ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳು ಪರಿಶೀಲನಾ ಹಂತದಲ್ಲಿರುವ ಸಂದರ್ಭದಲ್ಲಿಯೇ  ಅರಣ್ಯ ಇಲಾಖೆ ಸಿಬ್ಬಂದಿಗಳು ಜೆಸಿಬಿ ಬಳಸಿ ಹೊಲದ ಅಂಚಿನುದ್ದಕ್ಕೂ ಸುಮಾರು 200 ಮೀಟರಿನಷ್ಟು ಕಾಲುವೆ ತೆಗೆದಿರುವುದು ರೈತರನ್ನು ಸಿಟ್ಟಿಗೇಳಿಸಿದೆ.ಅರಣ್ಯ ಇಲಾಖೆಯ ಕ್ರಮದಿಂದ ತೀವೃ ಆಕ್ರೋಷಗೊಂಡ ಹವಾಲ್ದಾ ರಂಗಿ, ಹುಲಗೋಡ, ಕಳಸೂರು ಗ್ರಾಮಸ್ಥರು ಸ್ಥಳದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟಿನೆ ನಡೆಸಿ ಕಾಲುವೆ ಮುಚ್ಚುವ ಕಾರ್ಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ರೈತರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡ ಶಿವ ರಾಮ ಹೆಬ್ಬಾರ ಅರಣ್ಯ ಇಲಾಖೆಯ ಇಂತಹ ಕ್ರಮಗಳನ್ನು ಪಕ್ಷಾತೀತವಾಗಿ ವಿರೋಧಿಸಬೇಕು.

 

ಅರಣ್ಯಾಧಿಕಾರಿಗಳು ಅರಣ್ಯ ಹಕ್ಕು ಸಕ್ರಮ ಹಂತದಲ್ಲಿರು ವಾಗಲೇ ಇನ್ನಷ್ಟು ಗೊಂದಲ ಸೃಷ್ಟಿ ಸುವ ಉದ್ದೆೀಶದಿಂದ ರೈತರ ಗದ್ದೆಗಳಿಗೆ ಜೆಸಿಬಿ ಬಳಿಸಿ ಹಾಳುಗೆಡುವುತ್ತಿರು ವುದು ಹಿಂದಿನಿಂದ ಜೀವನೋಪಾಯಕ್ಕೆ ಅತಿಕ್ರಮಣ ಮಾಡಿಕೊಂಡು ಬದುಕು ಸಾಗಿಸುವ  ಸಮಸ್ಯೆಯಾಗುತ್ತಿದೆ.

 

ಹವಾಲ್ದಾರಂಗಿಯಲ್ಲಿ ರೈತರು ತೆಗೆದಿ ರುವ ಕಾಲುವೆಯನ್ನು ಸ್ವಯಂ ಪ್ರೇರಿತ ರಾಗಿ ಮುಚ್ಚುತ್ತಿದ್ದು, ಮತ್ತೆ ಕಾಲುವೆ ತೆಗೆಯುವ ದುಸ್ಸಾಹಸಕ್ಕೆ ಅರಣ್ಯ ಇಲಾಖೆ ಕೈಹಾಕಿದರೆ ರೈತರು ಸರಿ ಯಾಗಿ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು. ತಾಪಂ ಮಾಜಿ ಅಧ್ಯಕ್ಷ ಅಶೋಕ ತಿನ್ನೇಕರ ನೇತ್ರತ್ವದಲ್ಲಿ ನಡೆದ ಪ್ರತಿ ಭಟನೆಯಲ್ಲಿ ನಜೀರ ಶೇಖ, ಮೋಹನ, ಈರಪ್ಪ, ಸೂರಪ್ಪ ಮುಂತಾದವರು ಭಾಗವಹಿಸಿದ್ದರು.

Post Comments (+)