ಅರಣ್ಯ ಪ್ರದೇಶವಾಗಿ ತಾತಗುಣಿ

7

ಅರಣ್ಯ ಪ್ರದೇಶವಾಗಿ ತಾತಗುಣಿ

Published:
Updated:

ಬೆಂಗಳೂರು: `ಖ್ಯಾತ ಕಲಾವಿದ ರೋರಿಚ್ ಮತ್ತು ಪತ್ನಿ ದೇವಿಕಾ ರಾಣಿ ಅವರು ವಾಸಿಸುತ್ತಿದ್ದ 468 ಎಕರೆ ತಾತಗುಣಿ ಎಸ್ಟೇಟ್ ಅನ್ನು 1927ರ ಭಾರತೀಯ ಅರಣ್ಯ ಕಾಯ್ದೆ (ಸೆಕ್ಷನ್ 4)ರ ಅನ್ವಯ ಅರಣ್ಯ ಪ್ರದೇಶವಾಗಿ ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ~ ಎಂದು ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ತಿಳಿಸಿದರು.ಅರಣ್ಯ ಇಲಾಖೆ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರದ ನಂತರ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು. `ಎಸ್ಟೇಟ್‌ನ ಕೆಲವು ಭಾಗವನ್ನು ಉದ್ಯಾನ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಮೀಸಲಿಟ್ಟಿದ್ದು, ಉಳಿದದ್ದನ್ನು ಅರಣ್ಯ ಪ್ರದೇಶವೆಂದು ಪರಿಗಣಿಸಲಾಗುವುದು. ಈ ಪ್ರಸ್ತಾವವನ್ನು ಅಡ್ವೋಕೇಟ್ ಜನರಲ್ ಅವರಿಗೆ ಈಗಾಗಲೇ ಕಳುಹಿಸಲಾಗಿದೆ~ ಎಂದು ಹೇಳಿದರು.`ಆನೆಗಳು ಸಂಚರಿಸುವ ಈ ಮಾರ್ಗದಲ್ಲಿ ಮರ ಸಾಗಣೆ ಮತ್ತು ಇತರೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಪ್ರಸ್ತಾವ ಮುಂದಿಟ್ಟಿದೆ~ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry