ಬುಧವಾರ, ಜೂನ್ 23, 2021
21 °C

ಅರಣ್ಯ ಮತ್ತು ಕೆರೆಗಳಿಗೆ ಕಾಯಕಲ್ಪ ನೀಡಿ

ಎಂ. ಮಂಚಶೆಟ್ಟಿ ಕಡಿಲವಾಗಿಲು,ಮದ್ದೂರು ತಾ Updated:

ಅಕ್ಷರ ಗಾತ್ರ : | |

ದಿನೇ ದಿನೇ ವಾತಾವರಣ ಬಿಸಿ ಏರಿ ರಾಜ್ಯಾ ದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಬೆಳೆಗಳಿಗೆ,  ಜೀವಿಗಳಿಗೆ ಬೇಸಿಗೆಯ ರೌರವ ಪ್ರಾರಂಭದಲ್ಲಿಯೇ ಕಾಣಿಸ ತೊಡಗಿದೆ. ಮನುಷ್ಯನ ಅತ್ಯಂತ ಸ್ವಾರ್ಥ ಮನೋ ಭಾವಕ್ಕೆ   ನೆಲ ಜಲ  ವಾಯು, ಬೆಂಕಿ, ಬೆಳಕು, ವಾಣಿಜ್ಯೀಕರಣಗೊಳ್ಳುತ್ತಿದ್ದು (ಗೊಂಡಿದ್ದು) ಇಡೀ ಜೀವಸಂಕುಲ ವಿನಾಶದ ಅಂಚಿಗೆ ಸಾಗುತ್ತಿರುವುದು ಆತಂಕದ ವಿಷಯ.ಹಾಗಾಗಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಇಡೀ ವಾತಾವರಣದ ಬಗೆಗೆ ಕಾಳಜಿ ವಹಿಸಬೇಕಾಗಿದೆ. ಜರೂರಾಗಿ   ಸರ್ಕಾರ ಮಳೆ­ಗಾಲ ಪ್ರಾರಂಭವಾಗುವ ಮೊದಲು ಭೂಮಿ­ಯಲ್ಲಿ ಅಂತರ್ಜಲ ಅಭಿವೃದ್ಧಿಗೆ ಹೂಳು ತುಂಬಿರುವ ಕೆರೆಗಳಲ್ಲಿ ಹೂಳು ತೆಗೆಸಿ ಕೆರೆಗಳಿಗೆ ಕಾಯಕಲ್ಪ ನೀಡಬೇಕಿದೆ. ಕೆರೆಗಳ ಅಭಿವೃದ್ಧಿ­ಯಿಂದ ಗ್ರಾಮಗಳು ಸ್ವಾವಲಂಬಿಗಳಾಗಲೂ ಸಹಾಯವಾಗುತ್ತದೆ. ಅರಣ್ಯ ಸಂವರ್ಧಿಸುತ್ತದೆ. ಆದುದರಿಂದ ರಾಜ್ಯ ಸರ್ಕಾರ ಚುನಾವಣೆಯಲ್ಲಿ ತಲ್ಲೀನವಾಗುವ ಮೊದಲು, ಅಂತರ್ಜಲ ವೃದ್ಧಿಗೆ, ರಾಜ್ಯಾದ್ಯಂತ ಇರುವ ಸಣ್ಣ ಮಧ್ಯಮ ದೊಡ್ಡ ಕೆರೆಗಳಿಗೆ ಕಾಯಕಲ್ಪ ಕಲ್ಪಿಸಿ ಕನ್ನಡ ನಾಡನ್ನು, ಜೀವ ಸಂಕುಲವನ್ನು, ರೈತ ಕುಲಗಳನ್ನು ಸಂವರ್ಧಿಸಲು ಕ್ರಮ ಕೈಗೊಳ್ಳಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.