ಅರಣ್ಯ ರಕ್ಷಣೆ ಎಲ್ಲರ ಹೊಣೆ: ರೈ

6
ವಗ್ಗ: ವಿವಿಧ ಕಾಮಗಾರಿಗೆ ಚಾಲನೆ

ಅರಣ್ಯ ರಕ್ಷಣೆ ಎಲ್ಲರ ಹೊಣೆ: ರೈ

Published:
Updated:

ಬಂಟ್ವಾಳ: ವನ್ಯಜೀವಿ ಸಂಕುಲವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವುದರ ಜೊತೆಗೆ ಪ್ರಕೃತಿ ಸಹಜವಾಗಿ ನಿರ್ಮಾಣಗೊಂಡಿರುವ ಪರಿಸರ ಮತ್ತು ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.ತಾಲ್ಲೂಕಿನ ವಗ್ಗ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರೂ.34ಲಕ್ಷ ವೆಚ್ಚದ ಕೊಠಡಿ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.  ಸ್ಥಳೀಯ ಗ್ರಾ.ಪಂ.ಅಧ್ಯಕ್ಷೆ ರೋಹಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಇದೇ ವೇಳೆ ಕಾಲೇಜಿನ ವೇದಿಕೆ ಮತ್ತು ಸ್ಥಳೀಯ ಉಗ್ಗಬೆಟ್ಟು ಎಂಬಲ್ಲಿ ‘ಟಿ3 ಸಂಸ್ಥೆ’ ವತಿಯಿಂದ ನಿರ್ಮಾಣಗೊಂಡ ಪ್ರಯಾಣಿಕರ ಬಸ್‌ ತಂಗುದಾಣ ಉದ್ಘಾಟಿಸಿ, ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.ಸ್ಥಳೀಯ ನಿರ್ಖಾನ ಚರ್ಚಿನ ಧರ್ಮಗುರು ಆಲ್ಬನ್ ಡಿಸೋಜ, ಕಾರಿಂಜ ಕ್ಷೇತ್ರದ ಪಿ.ಜಿನರಾಜ ಅರಿಗ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ತಾ.ಪಂ.­ಸದಸ್ಯರಾದ ವಿನಯ ನಾಯಕ್, ಬಿ.ಪದ್ಮಶೇಖರ ಜೈನ್, ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ರಝಾಕ್, ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ, ತಾ.ಪಂ. ಕಾರ್ಯ­ನಿರ್ವ­ಹಣಾಧಿಕಾರಿ ವಿಶ್ವನಾಥ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ಪಿಯೂಸ್ ಎಲ್.ರಾಡ್ರಿಗಸ್, ಡಾ.ಪ್ರವೀಣ ಸೇರಾ, ಉದ್ಯಮಿ ವಿ.ಪಿ.ಲೋಬೊ, ಹರಿಶ್ಚಂದ್ರ ಪೈ, ರಘುಪತಿ ಶಾಸ್ತ್ರಿ, ಅಬ್ದುಲ್ ಲತೀಫ್ ಮಹಮ್ಮದ್ ತುಂಬೆ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry