ಅರಣ್ಯ ಹಕ್ಕು ಕಾಯ್ದೆ: ದಬಡ್ಕ ಹಾಡಿ ಪ್ರಕರಣ ವಿಚಾರಣೆ

7

ಅರಣ್ಯ ಹಕ್ಕು ಕಾಯ್ದೆ: ದಬಡ್ಕ ಹಾಡಿ ಪ್ರಕರಣ ವಿಚಾರಣೆ

Published:
Updated:

ಮಡಿಕೇರಿ: ಅರಣ್ಯ ಹಕ್ಕು ಸಮಿತಿ ಯಿಂದ ತಿರಸ್ಕೃತಗೊಂಡ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ದಬಡ್ಕ ಹಾಡಿಯ ಅರಣ್ಯ ಹಕ್ಕು ಕಾಯಿದೆಯ 84 ಪ್ರಕರಣಗಳ (ಕ್ಲೈಮು) ಬಹಿರಂಗ ವಿಚಾರಣೆಯನ್ನು ಹಿರಿಯ ಉಪವಿಭಾಗಾಧಿಕಾರಿ ಡಾ.ಎಂ.ಆರ್. ರವಿ ಸೋಮವಾರ ನಡೆಸಿದರು.ಚೆಂಬು ಗ್ರಾಮದಲ್ಲಿ ನಡೆದ ಈ ವಿಚಾರಣೆಯಲ್ಲಿ ಅರಣ್ಯ ಇಲಾಖೆಯ ವರು, ಗ್ರಾಮಸ್ಥರು ಭಾಗವಹಿಸಿದ್ದರು.

ದಬಡ್ಕ ಹಾಡಿಯು ಮೀಸಲು ಅರಣ್ಯ ಪ್ರದೇಶದಲ್ಲಿದೆ ಎಂದು ವಾದಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸೂಕ್ತ ದಾಖಲೆಗಳನ್ನು ನೀಡುವಲ್ಲಿ ವಿಫಲರಾದರು. ಸದರಿ ಜಾಗವು ಆರ್.ಟಿ.ಸಿ.ಯಲ್ಲಿ ಪೈಸಾರಿ ಎಂದು ನಮೂದಾಗಿರುವ ಕಾರಣ ನಿಮ್ಮ ಹೇಳಿಕೆಗೆ ಏನು ದಾಖಲೆ ಇದೆ ಎಂದು ಡಾ. ರವಿ ಪ್ರಶ್ನಿಸಿದರು.ಪ್ರತಿಯೊಂದು ಪ್ರಕರಣಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ದಾಖಲೆಗಳನ್ನು ರಚಿಸಿಕೊಂಡು   ಮುಂದಿನ ವಿಚಾರಣೆಗೆ ಹಾಜರಾಗ ಬೇಕು ಎಂದು ಅವರು ಸೂಚನೆ ನೀಡಿ ದರು. ಇದಕ್ಕೆ ಒಂದು ತಿಂಗಳ ಕಾಲಾ ವಕಾಶ ನೀಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಕೇಳಿ ಕೊಂಡರು. ಇದಕ್ಕೆ ಹಿರಿಯ ಉಪ ವಿಭಾಗಾಧಿಕಾರಿ ಸಮ್ಮತಿ   ಸೂಚಿಸಿದರು.ವಿಚಾರಣೆ ವೇಳೆ ಹಾಡಿಯ ಹಿರಿಯ ರಾದ 80 ವರ್ಷ ವಯಸ್ಸಿನ ಹಣ್ಣು ಹಾಗೂ ನೀಲು ಭಾಗವಹಿಸಿದ್ದರು. ಅವರೊಂದಿಗೆ ಗ್ರಾಮಸ್ಥರು, ಗ್ರಾಮದ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಚಂದಪ್ಪ, ಎಸಿಎಫ್ ಮೋಹನಕುಮಾರ್, ವಲಯ ಅರಣ್ಯಾಧಿಕಾರಿ ಜೀವನ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ     ಶಿವಕುಮಾರ್  ಉಪಸ್ಥಿತರಿದ್ದರು.ಮಡಿಕೇರಿ ತಾಲ್ಲೂ ಕಿನಲ್ಲಿ ಅರಣ್ಯ ಹಕ್ಕು ಸಮಿತಿಯಿಂದ ತಿರಸ್ಕೃತಗೊಂಡ ಒಟ್ಟು 466 ಪ್ರಕರಣಗಳ ಪೈಕಿ 291 ಪ್ರಕರಣಗಳು ಮಾತ್ರ ವಿಭಾಗಾಧಿಕಾರಿ ಮಟ್ಟಕ್ಕೆ ಮೇಲ್ಮನವಿ ಬಂದಿವೆ. ಇವುಗಳಲ್ಲಿ ಸಂಪಾಜೆ ಗ್ರಾ.ಪಂ. 86, ಚೆಂಬು ಗ್ರಾ.ಪಂ. 156, ಮದೆನಾಡು ಗ್ರಾ.ಪಂ. 47 ಹಾಗೂ ಕುಂದಚೇರಿ 2 ಪ್ರಕರಣಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry