ಅರಮನೆ ನಗರಿಗೆ ಆಗಮಿಸಿದ ಕ್ರಿಕೆಟ್ ತಂಡಗಳು

7

ಅರಮನೆ ನಗರಿಗೆ ಆಗಮಿಸಿದ ಕ್ರಿಕೆಟ್ ತಂಡಗಳು

Published:
Updated:

ಮೈಸೂರು: ಇಲ್ಲಿಯ ಗಂಗೋತ್ರಿ ಗ್ಲೇಡ್ಸ್ ನಲ್ಲಿ ಸೆಪ್ಟೆಂಬರ್ 25ರಿಂದ 28ರವರೆಗೆ ನಡೆಯಲಿರುವ ಭಾರತ ಎ ಮತ್ತು ವೆಸ್ಟ್ ಇಂಡೀಸ್ ಎ ತಂಡಗಳ ನಡುವಣ ಲೀಸ್ಟ್ ‘ಎ’ ಅಂತರರಾಷ್ಟ್ರೀಯ ದರ್ಜೆಯ ಪಂದ್ಯ ಆಡಲು ಉಭಯ ತಂಡಗಳು ಭಾನುವಾರ ನಗರಕ್ಕೆ ಆಗಮಿಸಿದವು.ಬೆಂಗಳೂರಿನಿಂದ ವಿಶೇಷ ಬಸ್ ಗಳಲ್ಲಿ ಎರಡೂ ತಂಡಗಳು ಆಗಮಿಸಿದವು. ಚೇತೇಶ್ವರ ಪೂಜಾರ ನಾಯಕತ್ವದ ಭಾರತ ‘ಎ’ ತಂಡದಲ್ಲಿ ಅಂತರರಾಷ್ಟ್ರೀಯ ಆಟಗಾರರಾ ಪರ್ವೇಜ್ ರಸೂಲ್, ಮೊಹಮದ್ ಶಮಿ, ಅಶೋಕ ದಿಂಡಾ, ಧವಳ್ ಕುಲಕರ್ಣಿ ಮತ್ತು ಜೀವನಜ್ಯೋತ್ ಸಿಂಗ್, ಕೆ.ಎಲ್. ರಾಹುಲ್, ಮನಪ್ರೀತ್ ಜುನೇಜ, ಹರ್ಷದ್ ಖಡಿವಾಲೆ, ಈಶ್ವರ್ ಪಾಂಡೆ, ರೋಹಿತ್ ಮೋಟವಾನಿ, ಪರಸ್ ಡೋಗ್ರ ಆಗಮಿಸಿದ್ದಾರೆ.ಕರ್ಕ್‌ ಎಡ್ವರ್ಡ್ ನಾಯಕತ್ವದ ವಿಂಡೀಸ್ ತಂಡದಲ್ಲಿ ಕಿರನ್ ಪೋವೆಲ್, ಕ್ರೇಗ್ ಬೈರತ್ವೇಟ್, ಜೋನಾಥನ್ ಕಾರ್ಟರ್, ಶೆಲ್ಡನ್ ಕೋಟ್ರೆಲ್, ಮಿಗುಲ್‌ ಕಮ್ಮಿನ್ಸ್, ನರಸಿಂಗ್ ದೇವನಾರಾಯಣ್‌, ಅಸಾದ್ ಪುಡೀಸ್, ಜಮಾರ್ ಹೆಮ್ಮಿಂಟನ್, ಲಿಯೋನ್ ಜಾನ್ಸನ್, ಡಿಲ್ರೋನ್ ಜಾನ್ಸನ್, ನಿಕಿತ್ ಮಿಲ್ಲರ್, ವೀರಸ್ವಾಮಿ ಪೆರುಮಾಳ್, ಶೇನ್ ಶಿಲಾಂಗ್ ಫೋರ್ಡ್,  ಚಾಡ್ವಿಕ್ ವಾಲ್ಟನ್  ಕೂಡ ಆಗಮಿಸಿದರು.ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಆಟಗಾರರಿರ ಹಣೆಗೆ ತಿಲಕ ಇಟ್ಟು, ಕೊರಳಿಗೆ ಮಲ್ಲಿಗೆ ಹೂವಿನ ಹಾರ ಹಾಕಿ, ಆರತಿ ಬೆಳಗಿ ಸ್ವಾಗತಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry