ಅರಮನೆ ಮೈದಾನದಲ್ಲಿ ನಾಳೆ ಕೊಲವೆರಿ ಅಲೆ

7

ಅರಮನೆ ಮೈದಾನದಲ್ಲಿ ನಾಳೆ ಕೊಲವೆರಿ ಅಲೆ

Published:
Updated:

`ವೈ ದಿಸ್ ಕೊಲವೆರಿ ಡಿ~ ಎಂಬ ಹೊಸ ಅಲೆ ಎಬ್ಬಿಸಿದ ತಂಗ್ಲಿಷ್ ಹಾಡು ಭಾನುವಾರ ಅರಮನೆ ಮೈದಾನದಲ್ಲಿ ಪ್ರತಿಧ್ವನಿಸಲಿದೆ. ಅದು ಕೂಡ ಆ ಹಾಡಿನ ರಚನೆಕಾರ ಮತ್ತು ಗಾಯಕರೂ ಆಗಿರುವ ನಟ ಧನುಷ್ ಧ್ವನಿಯಲ್ಲೇ. ಮೊಬೈಲ್ ಫೋನ್, ರೇಡಿಯೋ, ಟೀವಿ ಚಾನೆಲ್‌ಗಳಲ್ಲಿ ಹಾಡನ್ನು ಮತ್ತೆ ಮತ್ತೆ ಕೇಳುತ್ತಿದ್ದ ಸಿನಿಪ್ರಿಯರಿಗೆ ಧನುಷ್ ದನಿಯಲ್ಲಿ ನೇರವಾಗಿ ಈ ಹಾಡನ್ನು ವೀಕ್ಷಿಸುವ ಅವಕಾಶ ಲಭ್ಯವಾಗಿದೆ.`ಥ್ರೀ~ ಚಿತ್ರದ ಪ್ರಚಾರಕ್ಕಾಗಿ ಧನುಷ್ ಬೆಂಗಳೂರಿಗೆ ಬರುತ್ತಿದ್ದಾರೆ. ಅವರ ಜೊತೆಯಲ್ಲಿ ಚಿತ್ರದ ನಾಯಕಿ ಶ್ರುತಿ ಹಾಸನ್ ಮತ್ತು ಕೊಲವೆರಿ ಡಿ ಸಂಗೀತ ನಿರ್ದೇಶಕ ಅನಿರುದ್ಧ ಸಹ `ಕೊಲವೆರಿ ಡಿ ಇವೆಂಟ್~ನಲ್ಲಿ ಭಾಗವಹಿಸಲಿದ್ದಾರೆ.

 

ವೈ ದಿಸ್ ಕೊಲವೆರಿ ಡಿ, ಕ್ರಿಕೆಟಿಗ್ ಸಚಿನ್ ತೆಂಡೂಲ್ಕರ್ ಕುರಿತು ಬರೆದಿರುವ ಹಾಡು ಸೇರಿದಂತೆ `ಥ್ರೀ~ ಚಿತ್ರದ ವಿವಿಧ ಹಾಡುಗಳ ಗಾಯನ ಮತ್ತು ನೃತ್ಯ ಪ್ರದರ್ಶನದಂತಹ ಮನರಂಜನೆಯನ್ನು ಈ ಕಾರ್ಯಕ್ರಮ ಉಣಬಡಿಸಲಿದೆ. ಕನ್ನಡ ಮತ್ತು ತಮಿಳು ಸಿನಿಮಾ ಕಲಾವಿದರ ಸಂಗಮಕ್ಕೆ ಸಾಕ್ಷಿಯಾಗಲಿರುವುದು ಇದರ  ವಿಶೇಷತೆ.ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸ್ಪೆಲ್ ಫ್ಯಾಶನ್ ಅಕಾಡೆಮಿ ಎಂಬ ಸಂಸ್ಥೆ. ಇದು ತಮಿಳು ಚಿತ್ರ `ಥ್ರೀ~ಗೆ ಸೀಮಿತವಾದ ಕಾರ್ಯಕ್ರಮವಲ್ಲ. ತಮಿಳು ಮಾತ್ರವಲ್ಲದೆ ಕನ್ನಡದ ಹಾಡುಗಳ ಗಾಯನ ಮತ್ತು ನೃತ್ಯವೂ ಪ್ರದರ್ಶನಗೊಳ್ಳಲಿದೆ ಎನ್ನುತ್ತಾರೆ ಸ್ಪೆಲ್ ಸಂಸ್ಥೆಯ ಕ್ರಿಯೇಟಿವ್ ವಿಭಾಗದ ಮುಖ್ಯಸ್ಥ ಪ್ರತಾಪ್ ಗೌಡ.

 

ರಾಕೇಶ್ ಅಚ್ಯುತ ನೇತೃತ್ವದ ಬ್ಯಾಂಡ್ ಮ್ಯೂಸಿಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ. ಮಣಿಕಾಂತ್ ಕದ್ರಿ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಟಿ ರಮ್ಯಾ ಕೂಡ ಲಕ್ಕಿ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ.ಅಂದಹಾಗೆ ಕಾರ್ಯಕ್ರಮ ಫೆ.12ರ ಭಾನುವಾರ ಸಂಜೆ 7 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯಲಿದೆ. 1,500 ರೂ, 1000 ರೂ ಮತ್ತು 500 ರೂ ಟಿಕೆಟ್‌ಗಳು ಲಭ್ಯವಿರುತ್ತವೆ. ಟಿಕೆಟ್‌ಗಾಗಿ:  4111 2882 ದೂರವಾಣಿ ಸಂಪರ್ಕಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry