ಅರಳಾಳುಸಂದ್ರದಲ್ಲಿ ನಾಳೆಯಿಂದ ಆರಂಭ

7
ಸಮಾಜವಾದಿ ಜನಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ

ಅರಳಾಳುಸಂದ್ರದಲ್ಲಿ ನಾಳೆಯಿಂದ ಆರಂಭ

Published:
Updated:

ರಾಮನಗರ :  ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಮತ್ತು ಸಮಾಜವಾದಿ ಜನ ಪರಿಷತ್‌ ಜಂಟಿ ಯಾಗಿ ಇದೇ 10ರಿಂದ 13ರವರೆಗೆ ಚನ್ನಪಟ್ಟಣದ ಅರಳಾಳು ಸಂದ್ರ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿ ನಲ್ಲಿ ಸಮಾಜವಾದಿ ಜನಪರಿಷತ್ತಿನ ರಾಷ್ಟ್ರೀಯ ಕಾರ್ಯ ಕಾರಿಣಿ ಸಮಾವೇಶ ಮತ್ತು ವಿದ್ಯಾರ್ಥಿ–ಯುವಜನರಿಗಾಗಿ ಅಧ್ಯಯನ ಶಿಬಿರ ಆಯೋಜಿಸಿವೆ.ಇದೇ 10ರಂದು ‘ಯುವ ಜನರಿಗಾಗಿ ಸಮಾಜ ವಾದ’ ಒಂದು ದಿನದ ಅಧ್ಯಯನ ಶಿಬಿರ ಹಾಗೂ ಇದೇ 11 ಮತ್ತು 12ರಂದು ಜನಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸಮಾವೇಶ ನಡೆಯಲಿದೆ ಎಂದು ಸಮತಾ ವಿದ್ಯಾಲಯದ ಸ್ಥಾಪಕ ಟ್ರಸ್ಟಿ ಅನಸೂಯಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗಣ್ಯರ ಉಪಸ್ಥಿತಿ: ಶಿಬಿರದಲ್ಲಿ ಹಿರಿಯ ಸಮಾಜ ವಾದಿ ಕಡಿದಾಳು ಶಾಮಣ್ಣ, ಸಾಹಿತಿ ದೇವನೂರ ಮಹಾದೇವ, ಹಿರಿಯ ವಕೀಲ ರವಿವರ್ಮ ಕುಮಾರ್‌, ರಾಜ್ಯ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ಸಮಾಜವಾದಿಗಳಾದ ಶ್ರೀದೇವಿ, ಡಿ.ಎಸ್‌.ನಾಗಭೂಷಣ, ಸವಿತಾ ನಾಗಭೂಷಣ, ಜಿ.ಕೆ.ಸಿ.ರೆಡ್ಡಿ, ಸುನಿಲ್‌, ಸ್ವಾತಿ, ಅಫ್ಲಾತೂನ್‌ (ಮಧ್ಯಪ್ರದೇಶ), ನಿಶಾ ಶಿರೋಡ್ಕರ್‌, ಶಿವಾಜಿ (ಮಹಾರಾಷ್ಟ್ರ), ಲಿಂಗರಾಜ್‌ ಆಜಾದಿ (ಒಡಿಶಾ), ಜೋಷಿ ಜೇಕಬ್‌, ವಿನೋದ್‌ ಪಾಂಡ್ಯನ್‌ (ಕೇರಳ), ರಂಜಿತ್‌ (ಪಶ್ಚಿಮ ಬಂಗಾಳ) ಮೊದಲಾದವರು ಭಾಗವಹಿಸುವರು ಎಂದು ಅವರು ಹೇಳಿದ್ದಾರೆ.ಶಿಬಿರದಲ್ಲಿ ‘ರೋಟಿ ಔರ್‌ ಬೇಟಿ’ (ಅನ್ನ ಮತ್ತು ಮಗಳು), ಸಹಪಂಕ್ತಿ ಭೋಜನ, ಅಂತರ ಜಾತಿಯ ವಿವಾಹಗಳ ಬಗ್ಗೆ ಚರ್ಚೆ ನಡೆಯಲಿದೆ. ಪ್ರಜಾಪ್ರಭುತ್ವ ಮತ್ತು ಸಮಾಜವಾದ– ವಿಕಾಸದ ದಾರಿಗಳು, ಕೋಮುವಾದ ಹಾಗೂ ಬಹುಸಂಸ್ಕೃತಿಯ ಪ್ರಾಮುಖ್ಯತೆ, ಏಕತಾನತೆ– ಯುವ ಚೈತನ್ಯ ಮತ್ತು ಅಭಿವೃದ್ಧಿ ತಂತ್ರಜ್ಞಾನ ಕುರಿತು ವಿಚಾರ ವಿಮರ್ಶೆ ನಡೆಯಲಿವೆ ಎಂದು ತಿಳಿಸಿದ್ದಾರೆ.ರಾಷ್ಟ್ರೀಯ ಕಾರ್ಯಕಾರಿಣಿ ಸಮಾವೇಶದಲ್ಲಿ ರಾಷ್ಟ್ರೀಯ ರಾಜಕೀಯ ಸ್ಥಿತಿಗತಿ– ಸಂಪ್ರದಾಯವಾದಿ ರಾಜಕಾರಣದ ಇತಿ ಮಿತಿಗಳು, ಜನಾಂದೋಲನಗಳು ಮತ್ತು ಪರ್ಯಾಯ ರಾಜ ಕೀಯ ಶಕ್ತಿ, ರೈತ–ದಲಿತ–ಮಹಿಳಾ– ಪರಿಸರ ಚಳವಳಿಗಳ ಒಗ್ಗಟ್ಟಿನ ಸಾಧ್ಯತೆಗಳು, ಕರ್ನಾಟಕ ಸಮಾಜವಾದಿ ಕಾರ್ಯ ಕರ್ತರೊಂದಿಗಿನ ಸಂವಾದಗಳು ನಡೆಯಲಿವೆ ಎಂದರು.ಆಸಕ್ತರು ಹೆಚ್ಚಿನ ಮಾಹಿತಿಗೆ ಮೊಬೈಲ್‌ ಸಂಖ್ಯೆ 94489– 08505, 98452–50955 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry