ಅರವಳಿಕೆ ಶಾಸ್ತ್ರ: ಇನ್ನಷ್ಟು ಅಧ್ಯಯನ ಅಗತ್ಯ

7

ಅರವಳಿಕೆ ಶಾಸ್ತ್ರ: ಇನ್ನಷ್ಟು ಅಧ್ಯಯನ ಅಗತ್ಯ

Published:
Updated:

ಬೆಳಗಾವಿ: `ಅರವಳಿಕೆ ಶಾಸ್ತ್ರದ ಬಳಕೆ ಪುರಾತನ ಕಾಲದಿಂದಲೂ ಇದೆ. ಅನೇಕ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಸುಲಲಿತವಾಗಿ ಮಾಡಲಾಗುತ್ತಿದ್ದು, ಆ ಬಗೆಗೆ ಅಧ್ಯಯನವಾಗಬೇಕಿದೆ~ ಎಂದು ಬೆಳಗಾವಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಚಂದ್ರಶೇಖರ ಅಭಿಪ್ರಾಯ ಪಟ್ಟರು.  ನಗರದ ಬಿ.ಎಂ.ಕಂಕಣವಾಡಿ ಆಯುರ್ವೇದ ಕಾಲೇಜಿನಲ್ಲಿ ಅರವಳಿಕೆ ವಿಭಾಗದಿಂದ ಆಯೋಜಿಸಲಾಗಿದ್ದ ಭಾರತೀಯ ಅರವಳಿಕೆ ಸಂಘದ ಮೂರನೆಯ ಸಮಾವೇಶದಲ್ಲಿ ಅವರು ಮಾತನಾಡಿದರು.`ಪ್ಲಾಸ್ಟಿಕ್ ಸರ್ಜರಿ, ಮೂಳೆ ಮುಂತಾದ ಚಿಕಿತ್ಸೆಗಳಿಗೆ ಅವರು ಆಗಲೇ ಚಿಕಿತ್ಸೆ ನೀಡುತ್ತಿದ್ದರು. ಆ ಕುರಿತು ಸಂಶೋಧನೆ ಕೈಗೊಳ್ಳಬೇಕು~ ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಚಂದ್ರಕಾಂತ ಕೋಕಾಟೆ, ಸಸ್ಯಶಾಸ್ತ್ರಗಳಲ್ಲಿ ಅನೇಕ  ಅರವಳಿಕೆ  ಸಸ್ಯಗಳಿದ್ದು ಆ ಕುರಿತು ಸಂಶೋಧನೆಯಾಗಬೇಕು  ಎಂದರು.ಡಾ.ಪಿ.ಎಫ್. ಕೋಟೂರ, ಸಂಘದ ಮುಖ್ಯಸ್ಥ ಡಾ.ಡಿ.ಡಿ.ಪುರಾಣಿಕ ಮಾತನಾಡಿದರು. ಪ್ರಾಚಾರ್ಯ ಡಾ.ಬಿ.ಎಸ್.ಪ್ರಸಾದ, ಸಂಘದ  ಕಾರ್ಯದರ್ಶಿ  ಡಾ.ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು.  ಡಾ.ಸಂಗೀತಾ ಜಹಾಗೀರದಾರ ಪ್ರಾರ್ಥಿಸಿದರು. ಡಾ.ಹೇಮಂತ ತೋಷಿಖಾನೆ ನಿರೂಪಿಸಿದರು. ಡಾ.ಕೀಶೋರಕುಮಾರ ಹುಲ್ಲತ್ತಿ ವಂದಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry