ಅರವಿಂದ್, ಮಾಳವಿಕಾ ಚಾಂಪಿಯನ್ಸ್

7

ಅರವಿಂದ್, ಮಾಳವಿಕಾ ಚಾಂಪಿಯನ್ಸ್

Published:
Updated:

ಮೈಸೂರು: ಈಜುಗೊಳದಲ್ಲಿ ಪ್ರಾಬಲ್ಯ ಸಾಧಿಸಿದ ಬೆಂಗಳೂರು ನಗರ ತಂಡದ ಎಂ. ಅರವಿಂದ್ ಮತ್ತು  ವಿ. ಮಾಳವಿಕಾ  ರಾಜ್ಯಮಟ್ಟದ ದಸರಾ ಈಜು ಸ್ಪರ್ಧೆಯಲ್ಲಿ ಕ್ರಮವಾಗಿ  ಪುರುಷ ಮತ್ತು ಮಹಿಳಾ ವಿಭಾಗದ ವೈಯಕ್ತಿಕ ಚಾಂಪಿಯನ್ ಆಗಿ ಸಂಭ್ರಮಿಸಿದರು.ತಲಾ 15 ಅಂಕಗಳನ್ನು ತಮ್ಮದಾಗಿಸಿಕೊಂಡ ಅರವಿಂದ್ ಮತ್ತು ಮಾಳವಿಕಾ ವೈಯಕ್ತಿಕ ಪ್ರಶಸ್ತಿ ಸಂಪಾದಿಸಿಕೊಂಡರು.ಎರಡನೇ ದಿನವಾದ ಮಂಗಳವಾರ ಅರವಿಂದ್ ಎರಡು ವೈಯಕ್ತಿಕ ವಿಭಾಗದ ಚಿನ್ನ ಮತ್ತು ಮೆಡ್ಲೆ ರಿಲೆಯಲ್ಲಿ ಒಂದು ಚಿನ್ನದ ಪದಕ ಗಳಿಸಿದರು. ಮಹಿಳೆಯರ 100 ಮೀಟರ್ ಫ್ರೀಸ್ಟೈಲ್‌ನಲ್ಲಿ ವಿ.ಮಾಳವಿಕಾ ಮತ್ತೊಂದು ಸ್ವರ್ಣಪದಕಕ್ಕೆ ಕೊರಳೊಡ್ಡಿದರು. ಬೆಂಗಳೂರು ನಗರ ತಂಡವು  ಒಟ್ಟು 173 ಅಂಕಗಳನ್ನು ಗಳಿಸಿತು. ಮೈಸೂರು ತಂಡವು 37 ಅಂಕಗಳನ್ನು ಗಳಿಸಿತು.ಫಲಿತಾಂಶಗಳು:

ಪುರುಷರು: 100ಮೀ ಬ್ರೆಸ್ಟ್‌ಸ್ಟ್ರೋಕ್: ಆಕಾಶ್ ರೋಹಿತ್ (ಬೆಂಗಳೂರು ನಗರ)-1, ಬಿ. ಆದಿತ್ಯ ರೋಷನ್ (ಬೆಂಗಳೂರು)-2, ಉಮೇಶ್ ಕಾಡಗಿ (ಬೆಳಗಾವಿ)-3 ಕಾಲ: 1ನಿಮಿಷ, 16.49ಸೆಕೆಂಡು;100ಮೀ ಫ್ರೀಸ್ಟೈಲ್: ಚೇತನ್ ಬಿ. ಆರಾಧ್ಯ (ಬೆಂಗಳೂರು ನಗರ)-1, ಕೆ.ಎಸ್. ಪ್ರಜ್ವಲ್ (ಬೆಂಗಳೂರು ನಗರ)-2, ಎಚ್.ಸಿ. ಸನ್ಮಿತ್ (ಮೈಸೂರು)-3, ಕಾಲ: 57.53ಸೆ.

 

200 ಮೀ ಬ್ರೆಸ್ಟ್ ಸ್ಟ್ರೋಕ್: ಎಂ. ಅರವಿಂದ್ (ಬೆಂಗಳೂರು ನಗರ)-1, ವಾಸವಾನಂದ (ಬೆಂಗಳೂರು ನಗರ)-2, ಸುಮನ್ ಕದಂ (ಬೆಳಗಾವಿ)-3 ಕಾಲ: 2ನಿ,27.85ಸೆ;200ಮೀ ಬ್ಯಾಕ್‌ಸ್ಟ್ರೋಕ್: ಎಂ. ಅರವಿಂದ್ -1, ವಾಸವಾನಂದ (ಬೆಂಗಳೂರು ನಗರ)-2, ಎ.ಎಚ್. ಆಕಾಶ್ (ಮೈಸೂರು)-3, ಕಾಲ: 2ನಿ, 30.67ಸೆ;4x100 ಮೀ ಮೆಡ್ಲೆ ರಿಲೆ: ಬೆಂಗಳೂರು ನಗರ (ಎಂ. ಅರವಿಂದ್, ಆದಿತ್ಯ ರೋಷನ್. ಪ್ರಜ್ವಲ್, ಚೇತನ್ ಬಿ. ಆರಾಧ್ಯ)-1, ಮೈಸೂರು (ಎ.ಎಚ್. ಆಕಾಶ್, ಆರ್.ಕಾರ್ತಿಕ್, ಸನ್ಮಿತ್, ಸಿ.ಡಿ, ಮೋಹನ್)-2, ಗುಲ್ಬರ್ಗ (ಸಿ. ಕಾರ್ತಿಕ್, ವಿ. ಉಮೇಶ್, ಎನ್. ಅನಿಕೇತ್, ಸಿ.ಎಸ್.ಸಂತೋಷ್)-3, ಕಾಲ: 4ನಿ, 56.96ಸೆ;ಮಹಿಳೆಯರು: 100 ಮೀ ಫ್ರೀಸ್ಟೈಲ್: ವಿ. ಮಾಳವಿಕಾ (ಬೆಂಗಳೂರು ನಗರ)-1, ಪ್ರತಿಮಾ ಕೊಳಲಿ (ಬೆಂಗಳೂರು ನಗರ)-2, ಎಂ. ಅರುಂಧತಿ-3 ಕಾಲ: 1ನಿ, 03.32ಸೆ;100 ಮೀ ಬ್ರೆಸ್ಟ್‌ಸ್ಟ್ರೋಕ್: ದಿವ್ಯಾ ಗುರುಸ್ವಾಮಿ-1, ಪೂಜಾ ಆರ್. ಆಳ್ವಾ -2, ಎಂ. ಅರುಂಧತಿ -3; ಕಾಲ: 1ನಿ, 26.86ಸೆ; 200 ಮೀ ವೈಯಕ್ತಿಕ ಮೆಡ್ಲೆ: ಪೂಜಾ ಆರ್. ಆಳ್ವಾ (ಬೆಂಗಳೂರು ನಗರ)-1,  ದಿವ್ಯಾ ಗುರುಸ್ವಾಮಿ (ಬೆಂಗಳೂರು ನಗರ)-2, ಎಂ.ಅರುಂಧತಿ (ಮೈಸೂರು)-3 ಕಾಲ: 2ನಿ, 54.62ಸೆ;200 ಮೀ ಬ್ಯಾಕ್‌ಸ್ಟ್ರೋಕ್: ದಾಮಿನಿ ಕೆ. ಗೌಡ (ಬೆಂಗಳೂರು)-1, ಶರಣ್ಯ ವಿ. (ಬೆಂಗಳೂರು ನಗರ)-2, ಎಂ. ಅರುಂಧತಿ-3 ಕಾಲ: 2ನಿ, 47.96ಸೆ;

ವೈಯಕ್ತಿಕ ಚಾಂಪಿಯನ್‌ಷಿಪ್:ಪುರುಷರ ವಿಭಾಗ: ಎಂ.ಅರವಿಂದ್ (ಬೆಂಗಳೂರು ನಗರ, 15 ಅಂಕಗಳು).

ಮಹಿಳೆಯರ ವಿಭಾಗ: ವಿ. ಮಾಳವಿಕಾ (ಬೆಂಗಳೂರು ನಗರ; 15 ಅಂಕಗಳು).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry