ಅರಸೀಕೆರೆ: ಚಿರತೆ ಸೆರೆ

7

ಅರಸೀಕೆರೆ: ಚಿರತೆ ಸೆರೆ

Published:
Updated:

ಅರಸೀಕೆರೆ: ತಾಲ್ಲೂಕಿನ ಯಾದಾಪುರ ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದ ತಪ್ಪಲಿನ ಜಮೀನು, ತೋಟಗಳಲ್ಲಿ ಕೆಲ ದಿನಗಳಿಂದ  ಕಾಣಿಸಿಕೊಂಡು ಈ ಭಾಗದ ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆಯೊಂದು  ಅರಣ್ಯ ಸಿಬ್ಬಂದಿ ಇಟ್ಟಿದ್ದ ಬೋನಿನಲ್ಲಿ ಶುಕ್ರವಾರ ರಾತ್ರಿ ಸಿಕ್ಕಿ ಬಿದ್ದಿದೆ.

ಸುಮಾರು 9 ವರ್ಷ ಪ್ರಾಯದ ಈ ಗಂಡು ಚಿರತೆಯು ಶುಕ್ರವಾರ ಸಂಜೆ ಬೆಟ್ಟದ ತಪ್ಪಲಿನ ಮುರುಂಡಿ ಗ್ರಾಮದ ಸಂಪರ್ಕ ರಸ್ತೆಯ ಸೇತುವೆ ಕೆಳಗೆ ಮಲಗಿದ್ದನ್ನು ನೋಡಿದ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗೆ ವಿಷಯ ಮಟ್ಟಿಸಿದ್ದರು.

ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಚಿರತೆ ಮಲಗಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಬೋನು ಇಟ್ಟು ಅದರೊಳಗೆ ಕೋಳಿ ಕಟ್ಟಿದರು. ರಾತ್ರಿ 9.30 ಗಂಟೆ ಸಮಯದಲ್ಲಿ ಚಿರತೆ ಸೆರೆ ಸಿಕ್ಕಿತು. ಚಿರತೆ ಕಾಲಿಗೆ ಗಾಯವಾಗಿದ್ದು,  ಚಿಕಿತ್ಸೆ ಕೊಡಿಸಲಾಗಿದೆ.

ಹುಲಿ ಮರಿ ಸಾವು

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ  ಹೆಣ್ಣು ಹುಲಿ ಮರಿಯೊಂದು ಮೃತಪಟ್ಟಿದೆ. 10 ದಿನಗಳ ಹಿಂದೆ ಹೆಣ್ಣು ಹುಲಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ ಒಂದು ಮರಿಯು ತೀವ್ರ ಅಸ್ವಸ್ಥತೆಯಿಂದ ಮೃತಪಟ್ಟಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರಸ್ವಾಮಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry