ಅರಸೀಕೆರೆ: ಮಾದಿಗರ ಜಾಗೃತಿ ಸಮಾವೇಶ

7

ಅರಸೀಕೆರೆ: ಮಾದಿಗರ ಜಾಗೃತಿ ಸಮಾವೇಶ

Published:
Updated:
ಅರಸೀಕೆರೆ: ಮಾದಿಗರ ಜಾಗೃತಿ ಸಮಾವೇಶ

ಅರಸೀಕೆರೆ: .`ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ನಾವಿನ್ನೂ ಜಾಗೃತಿ ಸಮಾವೇಶ ಮಾಡುತ್ತಿದ್ದೇವೆ ಎಂದರೆ ಮಾದಿಗ ಸಮುದಾಯ ಎಷ್ಟೊಂದು ಹಿಂದುಳಿದಿದೆ ಎಂಬುದು ಅರ್ಥವಾಗುತ್ತದೆ~ ಎಂದು ಸಮಾಜ ಕಲ್ಯಾಣ ಹಾಗೂ ಬಂದಿಖಾನೆ ಸಚಿವ ಎ. ನಾರಾಯಣ ಸ್ವಾಮಿ ನುಡಿದರುಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ಆದಿಜಾಂಬವ ಮಾದಿಗ ಮಹಾಸಭಾ ಸೋಮವಾರ ಆಯೋಜಿಸಿದ್ದ ಆದಿಜಾಂಬವ ಸಾಂಸ್ಕೃತಿಕ ಸಮುದಾಯ ಭವನದ ಶಂಕುಸ್ಥಾಪನೆ ಮತ್ತು ಸ್ವಾಭಿಮಾನಿ ಮಾದಿಗರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.`ನಮ್ಮ ದೇಶದಲ್ಲಿ ಮಠಮಾನ್ಯಗಳು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕಾಣಿಕೆ ನೀಡಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಬಲಿಷ್ಠ ಸಮಾಜದ ಮಠಗಳು ಶೈಕ್ಷಣಿಕ ವ್ಯವಸ್ಥೆಯ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿವೆ ಎಂದರು.ಕೇಂದ್ರ ರಾಜ್ಯ ರೈಲ್ವೆ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ಕೆ.ಎಂ. ಶಿವಲಿಂಗೇಗೌಡ, ಹಿರಿಯೂರು ಆದಿಜಾಂಬವ ಮಠದ ಷಡಕ್ಷರಿ ಸ್ವಾಮೀಜಿ, ಮಾಜಿ ಶಾಸಕ ಎಚ್. ಆಂಜನೇಯ, ಎಲ್. ಹನುಮಂತಯ್ಯ, ಪುರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry