ಬುಧವಾರ, ಜೂನ್ 16, 2021
22 °C

ಅರಸೀಕೆರೆ: ಹೆಚ್ಚುತ್ತಿದೆ ಕುಡಿಯುವ ನೀರಿನ ಬವಣೆ

ವಿಶೇಷ ವರದಿ/ ಪ್ರಜಾವಾಣಿ ವಾರ್ತೆ/ ಮಾಡಾಳು ಶಿವಲಿಂಗಪ್ಪ Updated:

ಅಕ್ಷರ ಗಾತ್ರ : | |

ಅರಸೀಕೆರೆ: ತಾಲ್ಲೂಕಿನಲ್ಲಿ ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ತಲೆದೋರಿದೆ.ಕಳೆದ ಒಂದು ತಿಂಗಳಿನಿಂದ ಬಿಸಿಲಿನ ಪ್ರಖರತೆ ಏರುತ್ತಿರುವಂತೆ ಹಾಗೂ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದಾಗಿ ಗ್ರಾಮೀಣ ಜನರು ನೀರಿಗಾಗಿ ಕೈಯಲ್ಲಿ ಖಾಲಿ ಕೊಡ ಹಿಡಿದು ಮೈಲಿ ದೂರ ಸಾಗಬೇಕಾದ ಪರಿಸ್ಥಿತಿ ಉಂಟಾಗದೆ.ಸತತ ಬರದ ಛಾಯೆಗೆ ಸಿಲುಕುವ ತಾಲ್ಲೂಕಿನಲ್ಲಿ 572 ಹಳ್ಳಿ, ತಾಂಡ, ಹಟ್ಟಿಗಳನ್ನು ಒಳಗೊಂಡಿದೆ. ಈ ಪೈಕಿ 115 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕಳೆದ ಐದಾರು ವರ್ಷಗಳಿಂದ ಮಳೆ ಅಭಾವದಿಂದ ತಾಲ್ಲೂಕಿನ ಯಾವುದೇ ಕೆರೆ– ಕಟ್ಟೆಗಳ ಒಡಲು ತುಂಬದೆ ಇರುವುದರಿಂದ ಜಾನುವಾರುಗಳು ನೀರಿಗೆ ಪರಿತಪಿಸು­ವಂತಾಗಿದೆ. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಏನು ಮಾಡುವುದು ಎಂಬ ಚಿಂತೆ ಜನರಿಗೆ ಅಷ್ಟೇ ಅಲ್ಲ, ಅಧಿಕಾರಿಗಳನ್ನು ಕಾಡುತ್ತಿದೆ.ತಾಲ್ಲೂಕಿನ ಕಣಕಟ್ಟೆ, ಬಾಣಾವರ, ಗಂಡಸಿ, ಜಾವಗಲ್‌ ಹಾಗೂ ಕಸಬಾ ಹೋಬಳಿಗಳಲ್ಲಿ ಎಲ್ಲಾ ಕೆರೆ– ಕಟ್ಟೆಗಳ ಒಡಲು ಬರಿದಾಗಿದ್ದು ಭಣಗುಡುತ್ತಿವೆ. ಅಲ್ಲದೆ, ಅಂತರ್ಜಲ ಮಟ್ಟ ಕುಸಿತದಿಂದ ಕೆಲವು ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ, ಮತ್ತೆ ಕೆಲವು ಕೊಳವೆಬಾವಿಗಳು ನೀರಿಲ್ಲದೆ ಬತ್ತಿ ಹೋಗಿದ್ದು, ನೀರಿನ ಕ್ಷಾಮ ಎದುರಾಗಿದೆ.ಕಣಕಟ್ಟೆ ಹೋಬಳಿಯ ಶಶಿವಾಳ, ಚಿಕ್ಕಮೇಟಿಕರ್ಕೆ, ಯರಿಗೇನಹಳ್ಳಿ, ತುಂಬಾಪುರ, ತುಡಿಕೇನಹಳ್ಳಿ, ಡಿ.ಆರ್‌.ಜಿ. ಕೊಪ್ಪಲು, ಕಾಮ ಸಮುದ್ರ, ಪಿ. ಹೊಸಹಳ್ಳಿ, ನಾಗವೇದಿ, ಬಾಣಾವರ ಹೋಬಳಿಯ ಎ. ಮಲ್ಲಾಪುರ, ಕೆಂಗುರಬರಹಟ್ಟಿ, ಹಂಗುರಬರಟ್ಟಿ, ಚಿಕ್ಕಮನ್ನಹಳ್ಳಿ, ಸುಂಕದಹಳ್ಳಿ, ಕುರುವಾಂಕ, ಕಸಬಾ ಹೋಬಳಿಯ ಗುತ್ತಿನಕೆರೆ, ಹಾರನಹಳ್ಳಿ, ತಿರುಪತಿಹಳ್ಳಿ, ತಳಲುತೊರೆ, ದುಮ್ಮೇನಹಳ್ಳಿ, ಯಾದಾಪುರ, ಜಾಜೂರು, ಮುದ್ದನಹಳ್ಳಿ, ಯಳವಾರೆ ಇತರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಆಡಳಿತವಾಗಲಿ ಗಮನ­ಹರಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‘ಕಾಮಸಮುದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೂ, ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯ­ದಿಂದಾಗಿ 15 ದಿನಗಳಿಂದಲೂ ಗ್ರಾಮಸ್ಥರು ನೀರಿನ ಸಮಸ್ಯೆ  ಎದುರಿಸು­ವಂ­ತಾಗಿದೆ’ ಎಂದು ಗ್ರಾ.ಪಂ. ಸದಸ್ಯ ಬಸವರಾಜು ದೂರಿದ್ದಾರೆ.ಪಟ್ಟಣವೂ ಹೊರತಾಗಿಲ್ಲ: ಪಟ್ಟಣದ ಜನರೂ ನೀರಿನ ಬವಣೆ­ಯಿಂದ ಹೊರತಾಗಿಲ್ಲ. ಪುರಸಭೆ 8ರಿಂದ 10 ದಿನ ಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿರುವುದರಿಂದ ಜನರು ಟ್ಯಾಂಕರ್‌ ಮೊರೆ ಹೋಗಿದ್ದಾರೆ.ಪಟ್ಟಣದ ಜೇನುಕಲ್‌ ನಗರ, ಸುಬ್ರಮಣ್ಯ ನಗರ, ಲಕ್ಷ್ಮೀಪುರ ಬಡಾವಣೆ, ಈಡಿಗರ ಕಾಲೊನಿ, ಸುಭಾಷ್‌ನಗರ, ಸರಸ್ವತಿಪುರಂ, ಹೆಂಜಗೊಂಡನಹಳ್ಳಿ ಬಡಾವಣೆಯ ಜನರು ಕೊಡ ನೀರಿಗಾಗಿ ಪರಿತಪಿಸು­ವಂತಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.