ಅರಸು ಕುರಿತು ಲೇಖನಗಳಿಗೆ ಆಹ್ವಾನ

ಬುಧವಾರ, ಜೂಲೈ 24, 2019
24 °C

ಅರಸು ಕುರಿತು ಲೇಖನಗಳಿಗೆ ಆಹ್ವಾನ

Published:
Updated:

ಬೆಂಗಳೂರು: ಇದೇ ಆಗಸ್ಟ್20ರಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಡಿ. ದೇವರಾಜ ಅರಸುರವರ 97ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಸ್ಮರಣ ಸಂಚಿಕೆಯನ್ನು ಹೊರತರಲು ಉದ್ದೇಶಿಸಲಾಗಿದೆ. ವಿಷಯ: “ನಾನು ಕಂಡಂತೆ ಡಿ. ದೇವರಾಜ ಅರಸು”.ಸದರಿ ವಿಷಯದ ಬಗ್ಗೆ ಲೇಖನಗಳನ್ನು ಹಾಗೂ ವಿಶೇಷ ಭಾವಚಿತ್ರಗಳನ್ನು ಜುಲೈ 15ನೇ ತಾರೀಖಿನೊಳಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಲು ಕೋರಿದೆ: ನಿರ್ದೇಶಕರು, ದೇವರಾಜ ಅರಸು ಸಂಶೋಧನಾ ಸಂಸ್ಥೆ, ನಂ. 16-ಡಿ. ದೇವರಾಜ ಅರಸು ಭವನ, 2ನೇ ಮಹಡಿ, ಮಿಲ್ಲರ್ಸ್‌ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು-52.ಬೆರಳಚ್ಚು ಮಾಡಿಸಿದ ಲೇಖನಗಳು ಮೂರುಪುಟಗಳಿಗೆ ಸೀಮಿತವಾಗಿರಬೇಕು ಎಂದು ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಂ.ರಾಮಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry