ಬುಧವಾರ, ಮಾರ್ಚ್ 3, 2021
26 °C
ಅರಸು ಸಂಘದ ಪ್ರಥಮ ವಾರ್ಷಿಕೋತ್ಸವದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌

ಅರಸು ಸಮಾಜದ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸು ಸಮಾಜದ ಕೊಡುಗೆ ಅಪಾರ

ಕನಕಪುರ:  ಅರಸು ಸಮುದಾಯ  ದೇಶವನ್ನಾಳಿದ ರಾಜವಂಶಸ್ಥವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೂ ಮುಂಚಿತವಾಗಿ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುವ ಮೂಲಕ ಇತಿಹಾಸದದಲ್ಲಿ ದಾಖಲೆಯಾಗಿ ಉಳಿದಿದ್ದಾರೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.ನಗರದ ರೈಸ್‌ಮಿಲ್‌ನಲ್ಲಿರುವ ಪುಟ್ಟಚಾರ್‌ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಅರಸು ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ 600ಕ್ಕೂ ಹೆಚ್ಚು ಅರಸು ಮನೆತನದ ರಾಜರುಗಳು ಆಳ್ವಿಕೆ ನಡೆಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ನಾಲ್ವಡಿ ಕೃಷ್ಣರಾಜ ಅರಸು ಅವರು ಕೈಗಾರಿಕಾ, ಶಿಕ್ಷಣ, ಸಾಮಾಜಿಕ ನ್ಯಾಯ, ಸಾಮಾಜಿಕ ಬದ್ಧತೆ, ಶೋಷಿತ ಸಮುದಾಯಗಳ ಅಭಿವೃದ್ಧಿ ಕಲ್ಯಾಣ ಕಾರ್ಯಕ್ರಮ, ಸಮಾಜದಲ್ಲಿ ಸಮಾನತೆ, ಮಾನವೀಯ ಮೌಲ್ಯವುಳ್ಳ ಕಾರ್ಯಕ್ರಮ ರೂಪಿಸಿದ್ದಾರೆ.ಇದೇ ಸಂದರ್ಭದಲ್ಲಿ ಅರಸು ಚಿಂತಕರ ಛಾವಡಿ ವತಿಯಿಂದ ರಾಜ್ಯದಲ್ಲಿ ಎಲ್ಲಾ ಜನಾಂಗದ ಶಾಸಕರು, ಸಂಸದರು, ವಿಧಾನ ಪರಿಷತ್‌್ ಸದಸ್ಯರಿದ್ದಾರೆ. ನಮ್ಮ ಸಮುದಾಯದಲ್ಲಿ ಇಲ್ಲ.  ಮುಂದೆ ನಮ್ಮ ಸಮುದಾಯದಿಂದ ಒಬ್ಬರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಬೇಕೆಂಬ ಮನವಿ ಪತ್ರವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನೀಡಿದರು.ತಾಲ್ಲೂಕು ರಂಗಕಲಾ ಶಿಕ್ಷಕರು ಹಾಗೂ ಪಕ್ಕವಾದ್ಯಗಾರರ ಸಂಘದ ಸದಸ್ಯರು ಸಂಘಕ್ಕೆ ಒಂದು ನಿವೇಶನ ನೀಡಬೇಕೆಂದು ಮನವಿ ಪತ್ರ ಸಚಿವ ಡಿ.ಕೆ.ಶಿವಕುಮಾರ್‌ಗೆ ನೀಡಿದರು.ವಿಧಾನ ಪರಿಷತ್‌ ಸದಸ್ಯ ಎಸ್.ರವಿ, ಕಂಠೀರವ ಸ್ಟುಡಿಯೊ ಅಧ್ಯಕ್ಷೆ ಬಿ.ಕೆ.ವಿಜಯಲಕ್ಷ್ಮಿ  ಅರಸು, ಬೆಂಗಳೂರು ಅರಸು ಅಸೋಷಿಯೇಷನ್‌ ಅಧ್ಯಕ್ಷೆ ಭಾರತಿ ಅರಸು. ಎನ್‌, ಬಿ.ಎಲ್‌. ಪ್ರಭುದೇವ ರಾಜೇ ಅರಸು, ತಾಲ್ಲೂಕು ಅರಸು ಸಂಘದ ಎನ್.ಅರ್‌. ದೇವರಾಜೇ ಅರಸು,ಗೌರವ ಅಧ್ಯಕ್ಷ ಎನ್‌.ಡಿ. ರಾಜೇ ಅರಸು, ಸಂಸ್ಥಾಪಕ ಉಪಾಧ್ಯಕ್ಷ ಎಚ್.ಡಿ. ಸಿದ್ದರಾಜೇ ಅರಸು, ಕಾರ್ಯದರ್ಶಿ ಕೆ.ಆರ್‌. ರಾಘವೇಂದ್ರರಾಜೇ ಅರಸು, ಖಜಾಂಜಿ ಟಿ.ವಿ.ರಾಮರಾಜೇ ಅರಸು, ಸೇರಿದಂತೆ ಸಂಘದ ಎಲ್ಲ ನಿರ್ದೇಶಕರು, ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.