ಅ.ರಾ. ಮಿತ್ರ ಅವರಿಗೆ ಸೇಡಿಯಾಪು ಪ್ರಶಸ್ತಿ

7

ಅ.ರಾ. ಮಿತ್ರ ಅವರಿಗೆ ಸೇಡಿಯಾಪು ಪ್ರಶಸ್ತಿ

Published:
Updated:

ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನೀಡುವ ಸೇಡಿಯಾಪು ಪ್ರಶಸ್ತಿಗೆ ಸಂಶೋಧಕ ಹಾಗೂ ವಿಮರ್ಶಕ ಪ್ರೊ. ಅ.ರಾ. ಮಿತ್ರ ಆಯ್ಕೆಯಾಗಿದ್ದಾರೆ ಎಂದು ಸಂಶೋಧನಾ ಕೇಂದ್ರದ ನಿರ್ದೇಶಕ ಎಚ್‌. ಕೃಷ್ಣಭಟ್‌ ತಿಳಿಸಿದ್ದಾರೆ. ವಚನಕಾರರು ಮತ್ತು ಶಬ್ದಕಲ್ಪ, ಒಳನೋಟಗಳು, ಛಂದೋಮಿತ್ರ, ನಾನೇಕೆ ಕೊರೆಯುತ್ತೇನೆ, ಆರತಕ್ಷತೆ ಇವರ ಪ್ರಮುಖ ವಿಮರ್ಶಾ ಕೃತಿಗಳಾಗಿವೆ. ‘ಬಾಲ್ಕನಿಯ ಬಂಧುಗಳು’ ೧೯೬೮ರಲ್ಲಿ ಎರಡನೆಯ ಮುದ್ರಣ ಕಂಡ ಪ್ರಬಂಧಗಳ ಸಂಗ್ರಹ ಕೃತಿಯಾಗಿದೆ. ‘ಯಾರೋ ಬಂದಿದ್ದರು’ ಹಾಸ್ಯ ಮಿಶ್ರಿತ ಹರಟೆ ಲೇಖನಗಳ ಸಂಗ್ರಹ.‘ಪುರಂದರ ಸಾಹಿತ್ಯ ದರ್ಶನ’ ಇವರ ಸಂಪಾದಿತ ಕೃತಿಯಾಗಿದೆ. ಜಗತ್ತಿನ ಪ್ರಣಯ ಕಥೆಗಳ ಸಂಪುಟ, ಪ್ರೇಮನದಿಯ ದಡಗಳಲ್ಲಿ ಮತ್ತು ‘ಕುಮಾರವ್ಯಾಸ ಭಾರತ ಕಥಾಮಿತ್ರ’ ಬೃಹತ್ ಗದ್ಯಕೃತಿ ಇತ್ತೀಚೆಗೆ ಪ್ರಕಟಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry