ಅರಿವಿನ ಒರತೆ:ಸ್ನೇಹದ ಬೆಲೆ

7

ಅರಿವಿನ ಒರತೆ:ಸ್ನೇಹದ ಬೆಲೆ

Published:
Updated:

ಇಬ್ಬರು ಆಪ್ತ ಸ್ನೇಹಿತರು ಮರಳಿನ ಮೇಲೆ ನಡೆದು ಹೋಗುತ್ತಿದ್ದರು. ಮಾತಿನ ನಡುವೆ ಮೊದಲನೆಯವನಿಗೆ ಕೋಪ ಬಂದು ಎರಡನೆಯವನ ಕೆನ್ನೆಗೆ ಬಾರಿಸಿದ. ಇದರಿಂದ ತೀವ್ರ ನೊಂದ ಎರಡನೆಯವನು `ನನ್ನ ಸ್ನೇಹಿತ ನನ್ನ ಕೆನ್ನೆಗೆ ಹೊಡೆದ~ ಎಂದು ಮರಳಿನ ಮೇಲೆ ಬರೆದ.ಕೊಂಚ ದೂರ ಸಾಗಿದ ಬಳಿಕ ಎರಡನೆಯವನು ಕೆಸರಿನಲ್ಲಿ ಜಾರಿ ಬಿದ್ದು ಮುಳುಗಲಾರಂಭಿಸಿದ. ಮೊದಲನೆಯವನು ಕೂಡಲೇ ಕೈಹಿಡಿದು ಅವನನ್ನು ಮೇಲಕ್ಕೆಳೆದುಕೊಂಡ.ಸುಧಾರಿಸಿಕೊಂಡ ಅವನು ಪಕ್ಕದಲ್ಲಿದ್ದ ಕಲ್ಲಿನ ಮೇಲೆ `ನನ್ನ ಸ್ನೇಹಿತ ಇಂದು ನನ್ನ ಪ್ರಾಣ ಉಳಿಸಿದ~ ಎಂದು ಬರೆದ. ಆಗ ಮೊದಲನೆಯವನು `ನಾನು ಹೊಡೆದಾಗ ಮರಳಿನ ಮೇಲೆ ಬರೆದೆ, ಕೆಸರಿನಿಂದ ಎತ್ತಿದಾಗ ಕಲ್ಲಿನ ಮೇಲೆ ಬರೆದದ್ದು ಯಾಕೆ?~ ಎಂದು ಕೇಳಿದ.ಅದಕ್ಕೆ ಮೊದಲನೆಯವನು ಯಾರಾದರೂ ನಮಗೆ ನೋವುಂಟು ಮಾಡಿದಾಗ ಕ್ಷಮೆ ಎಂಬ ಗಾಳಿ ಅದನ್ನು ಅಳಿಸಿ ಹಾಕಲು ಸಾಧ್ಯವಾಗುವಂತೆ ಮರಳಿನಲ್ಲಿ ಬರೆಯಬೇಕು, ಅದೇ ಉಪಕಾರ ಮಾಡಿದಾಗ ಅಚ್ಚಳಿಯದೇ ನಿಲ್ಲುವ ಮನಸ್ಸೆಂಬ ಕಲ್ಲಿನ ಮೇಲೆ ಕೆತ್ತಬೇಕು ಎಂದು ಹೇಳಿದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry