ಅರಿವಿನ ಜೊತೆ ಚಿಂತನೆಯೂ ಅಗತ್ಯ

7

ಅರಿವಿನ ಜೊತೆ ಚಿಂತನೆಯೂ ಅಗತ್ಯ

Published:
Updated:

ಶಹಾಪುರ: ಶರಣರ ಬದುಕಿನ ಮಾರ್ಗದರ್ಶನ ಜೊತೆಯಲ್ಲಿ ಅರಿವಿನ ಚಿಂತನೆಯೂ ನಮಗೆ ಅಗತ್ಯವಾಗಿದೆ. ಬದುಕು ಹಾಗೂ ನಡೆಗೆ ಸಾಮ್ಯತೆಯಿಂದ ಜೀವನದುದ್ದಕ್ಕೂ ಸಾಗಿದ ಪರಿಯು ನಮಗೆ ಆದರ್ಶಪ್ರಾಯವಾಗಿದೆ ಎಂದು ಸಾಹಿತಿ ಚಂದ್ರಕಾಂತ ಕರದಳ್ಳಿ ಹೇಳಿದರು.ಪಟ್ಟಣದ ಬಸವರಾಜ ಹಾದಿಮನೆಯಲ್ಲಿ ಈಚೆಗೆ ಬಸಮ್ಮ ತಾಯಿ ಸ್ಮರಣಾರ್ಥ ಹಮ್ಮಿಕೊಂಡಿದ್ದ146ನೇ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ  ಮಾತನಾಡಿದರು. ಹುಟ್ಟು ಆಕಸ್ಮಿಕವಾಗಿದ್ದರು ಸಾವು ಮಾತ್ರ ನಿಶ್ಚಿತವಾಗಿದೆ.

ಪ್ರಾಣ ಹೋದ ನಂತರ  ಮನುಷ್ಯನನ್ನುಯಾರು ಕೇಳುವುದಿಲ್ಲ. ಆದರೆ ಜೀವನದಲ್ಲಿ ಬದುಕಿದ ರೀತಿ ಹಾಗೂ ನಂಬಿದ ಸಿದ್ದಾಂತ ಜೊತೆಯಲ್ಲಿ ಸಮಾಜಮುಖಿಯಾಗಿ ನಿರ್ವಹಿಸಿದ ಕೆಲಸವನ್ನು ಸಮಾಜವು ಎಂದು ಮರೆಯಲು ಸಾಧ್ಯವಿಲ್ಲವೆಂದು ಅವರು ಅಭಿಪ್ರಾಯಪಟ್ಟರು. ನ್ಯಾಯಾಧೀಶರಾದ ಎಂ.ಸಿ.ಬಿರೆದಾರ, ವಿಶ್ವಾರಾಧ್ಯ ಸತ್ಯಂಪೇಟೆ, ಶಿವಣ್ಣ ಇಜೇರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸ್ವಾಗತ ಡಾ.ಬಸವರಾಜ ಇಜೇರಿ, ನಿರ್ವಹಣೆ ಖಾಸಿಂಅಲಿ, ಸಿದ್ದುರಾಜ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry