ಅರುಣಾಚಲ ಪ್ರದೇಶ: 23 ಮಂದಿ ಇದ್ದ ಹೆಲಿಕಾಪ್ಟರ್ ಪತನ

7

ಅರುಣಾಚಲ ಪ್ರದೇಶ: 23 ಮಂದಿ ಇದ್ದ ಹೆಲಿಕಾಪ್ಟರ್ ಪತನ

Published:
Updated:
ಅರುಣಾಚಲ ಪ್ರದೇಶ: 23 ಮಂದಿ ಇದ್ದ ಹೆಲಿಕಾಪ್ಟರ್ ಪತನ

ಇಟಾನಗರ (ಪಿಟಿಐ): 23 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಪವನ್ ಹ್ಯಾನ್ಸ್ ಹೆಲಿಕಾಪ್ಟರ್ ಒಂದು ಮಂಗಳವಾರ ಅರುಣಾಚಲ ಪ್ರದೇಶದ ತವಾಂಗ್ ಪಟ್ಟಣದಲ್ಲಿ ಕೆಳಕ್ಕಿಳಿಯುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಕಣಿವೆಗೆ ಅಪ್ಪಳಿಸಿದೆ.ಹೆಲಿಕಾಪ್ಟರ್ ನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಗತಿ ಏನಾಗಿದೆ ಎಂಬುದು ತತ್ ಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ಪವನ್ ಹ್ಯಾನ್ಸ್ ಮೂಲಗಳು ತಿಳಿಸಿವೆ.ಗುವಾಹತಿಯಿಂದ ಮಧ್ಯಾಹ್ನ 1.15 ಗಂಟೆಗೆ ಗಗನಕ್ಕೆ ಏರಿದ್ದ ಹೆಲಿಕಾಪ್ಟರ್ ಗುಡ್ಡದ ಮೇಲಿನ ತವಾಂಗ್ ಪಟ್ಟಣದ ಹೆಲಿಪ್ಯಾಡ್ ಸಮೀಪ ಅಪಘಾತಕ್ಕೆ ಈಡಾಯಿತು.ಅದು 15 ಮೀಟರ್ ಎತ್ತರದಿಂದ ಕಣಿವೆಗೆ ಉರುಳಿದೆ ಎಂದು ಮೂಲಗಳು ಹೇಳಿವೆ.ಹೆಲಿಕಾಪ್ಟರ್ ನಲ್ಲಿ ಇಬ್ಬರು ಮಕ್ಕಳು ಸೇರಿ 18 ಮಂದಿ ಪ್ರಯಾಣಿಕರು, ಕ್ಯಾಪ್ಟನ್ ವರುಣ್ ಗುಪ್ತ ಮತ್ತು ಕ್ಯಾಪ್ಟನ್ ತಿವಾರಿ ಸೇರಿದಂತೆ ಐವರು ಸಿಬ್ಬಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry