ಶುಕ್ರವಾರ, ನವೆಂಬರ್ 15, 2019
21 °C

ಅರುಣ್ ಮಿಶ್ರ ನೂತನ ಡಿಜಿಸಿಎ

Published:
Updated:

ನವದೆಹಲಿ (ಪಿಟಿಐ): ವಿಶ್ವಸಂಸ್ಥೆಯ ಘಟಕವಾದ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆಗೆ (ಐಸಿಎಒ) ಭಾರತದ ಕಾಯಂ ಪ್ರತಿನಿಧಿಯಾಗಿರುವ ಅರುಣ್ ಮಿಶ್ರ ಅವರು ರಾಷ್ಟ್ರದ ನೂತನ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರಾಗಿ (ಡಿಜಿಸಿಎ)ಅಧಿಕಾರ ವಹಿಸಿಕೊಳ್ಳಲಿದ್ದಾರೆ.

50 ವರ್ಷದ ಮಿಶ್ರ ಅವರ `ಐಸಿಎಒ~ ಸೇವಾವಧಿ ಈ ವಾರ ಕೊನೆಗೊಳ್ಳಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)