ಅರೆತಲೆನೋವಿಗೆ ಸ್ಥೂಲಕಾಯವೂ ಕಾರಣ

7
ಹೊಸ ಅಧ್ಯಯನದಿಂದ ಬಹಿರಂಗ

ಅರೆತಲೆನೋವಿಗೆ ಸ್ಥೂಲಕಾಯವೂ ಕಾರಣ

Published:
Updated:

ವಾಷಿಂಗ್ಟನ್‌(ಪಿಟಿಐ): ನಿಮಗೆ ನಿರಂತರವಾಗಿ ಅರೆತಲೆ­ನೋವೇ, ಹಾಗಿದ್ದರೆ ಅದಕ್ಕೆ ನಿಮ್ಮ ಸ್ಥೂಲಕಾಯವೂ ಒಂದು ಕಾರಣ ಇರಬಹುದು ಎಂದು ಹೊಸ ಅಧ್ಯಯನ ಒಂದು ಎಚ್ಚರಿಸಿದೆ.ಸಂಶೋಧನೆಗೆ ಒಳಪಡಿಸಿದ ಜನರಲ್ಲಿ ಶೇ 81ರಷ್ಟು ಜನರಿಗೆ ಅರೆತಲೆ ನೋವು ಇರುವುದು ತಿಳಿದುಬಂದಿದ್ದು, ಅವರಲ್ಲಿ ಬಹುಪಾಲು ಸ್ಥೂಲಕಾಯ­ಹೊಂದಿದವರಾಗಿದ್ದಾರೆ.ಆರೋಗ್ಯವಂತರಿಗೆ ಅರೆ ತಲೆನೋವು ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆ ಬರುತ್ತದೆ. ಆದರೆ ಸ್ಥೂಲಕಾಯದವರಿಗೆ ಹದಿನೈದು ದಿನಕ್ಕೊಮ್ಮೆ ಎಂಬಂತೆ ತಿಂಗಳಲ್ಲಿ ಎರಡುಬಾರಿ ಬರುತ್ತದೆ ಎಂಬುದನ್ನು ಅಮೆರಿಕದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.‘ಬಹುಕಾಲದಿಂದ ಅರೆತಲೆ­ನೋವಿ­ನಿಂದ ಬಳಲುತ್ತಿರುವ ವರನ್ನು ಮತ್ತು ಸ್ಥೂಲಕಾಯ ಹೊಂದಿರುವವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಸ್ಥೂಲ­ಕಾಯದವರಿಗೆ ಅರೆತಲೆನೋವಿನ ಸಮಸ್ಯೆ ಹೆಚ್ಚು. ದೇಹದ ತೂಕದಲ್ಲಿನ ಏರುಪೇರು ಸಹ ಅರೆತಲೆನೋವಿಗೆ ಒಂದು ಕಾರಣ. ಇದನ್ನು ಜನರಿಗೆ ಮತ್ತು ವೈದ್ಯರಿಗೆ ತಿಳಿಸುವುದೇ ನಮ್ಮ ಗುರಿ’ ಎನ್ನುತ್ತಾರೆ ಅಮೆರಿಕದ ಜಾನ್‌ ಹಾಪ್‌ಕಿನ್ಸ್‌ ಔಷಧ ವಿಶ್ವವಿದ್ಯಾ­ನಿಲಯದ ಸಂಶೋಧಕ ಬಿ ಲೀ ಪೀಟರ್‌ಲಿನ್‌.47 ವಯಸ್ಸಿನ 3,862 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅದರಲ್ಲಿ ಅವರ ತೂಕ ಮತ್ತು ಎತ್ತರ ಮತ್ತು ಅರೆತಲೆನೋವಿನ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ಇವರಲ್ಲಿ 1,044 ಜನರು ಸ್ಥೂಲಕಾಯಿಗಳು ಮತ್ತು 188 ಜನರು ಪ್ರಾಸಂಗಿಕವಾಗಿ ಅರೆತಲೆ­ನೋವಿನ ಸಮಸ್ಯೆಯಿಂದ ಬಳಲು­ತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ.‘ಈ ಅಧ್ಯಯನದಿಂದ ಬಂದ ಮಾಹಿತಿಯ ಪ್ರಕಾರ ಅರೆತಲೆನೋವಿಗೆ ಸ್ಥೂಲಕಾಯವೂ ಒಂದು ಕಾರಣ. ಆದ್ದರಿಂದ ನಿಯಮಿತ ಆಹಾರ ಮತ್ತು ವ್ಯಾಯಾಮ ಮಾಡುವುದನ್ನು ಅಳ­ವಡಿಸಿಕೊಂಡರೆ ಅರೆತಲೆನೋವಿನಿಂದ ಮುಕ್ತಿ ಪಡೆಯಬಹುದು’ ಎನ್ನುವುದು ಪೀಟರ್‌ಲಿನ್‌ ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry