ಅರೆಬೆತ್ತಲೆ ಮೆರವಣಿಗೆ, ಟೈರ್‌ಗೆ ಬೆಂಕಿ

7
ವೈದ್ಯಕೀಯ ಕಾಲೇಜಿನಲ್ಲೇ ಜಿ.ಎನ್‌.ಎಂ. ಪರೀಕ್ಷೆಗೆ ಒತ್ತಾಯ

ಅರೆಬೆತ್ತಲೆ ಮೆರವಣಿಗೆ, ಟೈರ್‌ಗೆ ಬೆಂಕಿ

Published:
Updated:

ಬೀದರ್: ಎಲ್ಲ ಕಾಲೇಜುಗಳ ಡಿಪ್ಲೊಮಾ ಇನ್‌ ಜಿ.ಎನ್‌.ಎಂ. ಪರೀಕ್ಷೆ­ಗಳನ್ನು ಬೀದರ್‌ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿ ಕನ್ನಡ ಸಮರ ಸೇನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಅಂಬೇಡ್ಕರ್‌ ವೃತ್ತ­ದಲ್ಲಿ ಟೈರ್‌ಗೆ ಬೆಂಕಿ ಹಚ್ಚಿದರು.

ಜಿಲ್ಲೆಯಲ್ಲಿ ಆರಂಭದಿಂದಲೂ ನರ್ಸಿ­ಂಗ್‌ ಪರೀಕ್ಷೆಗಳು ಅಕ್ರಮವಾಗಿ ನಡೆಯುತ್ತಿ­ದ್ದು, ಈ ಬಗ್ಗೆ ಸಚಿವರು, ಸಂಬಂ­ಧ­ಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋ­ಜನವಾಗಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಆಪಾದಿಸಿದ್ದಾರೆ.ಜಿಲ್ಲೆಯ 38 ನರ್ಸಿಂಗ್‌ ಕಾಲೇಜು­ಗಳ ಪೈಕಿ ಕೆಲ ಕಾಲೇಜು ವಿದ್ಯಾರ್ಥಿಗಳು ಮಾತ್ರ ಸರ್ಕಾರಿ ವೈದ್ಯಕೀಯ ಕಾಲೇಜಿ­ನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಇನ್ನುಳಿದ ಕಾಲೇಜು ಆಡಳಿತ ಮಂಡಳಿ­ಗಳು ತಮ್ಮ ಕಾಲೇಜಿನಲ್ಲಿಯೇ ಪರೀಕ್ಷೆ ನಡೆಯುವಂತೆ ನೋಡಿಕೊಂಡಿವೆ ಎಂದು ಆರೋಪಿಸಿದ್ದಾರೆ.

ನರ್ಸಿಂಗ್‌ ಪರೀಕ್ಷಾ ಮಂಡಳಿ ಸರ್ಕಾ­ರಿ ವೈದ್ಯಕೀಯ ಕಾಲೇಜಿನಲ್ಲಿಯೇ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಂಡಿ­ತ್ತು. ಆದರೆ, ಪರೀಕ್ಷೆಗೆ ಒಂದು ದಿನ ಮುಂಚೆ ಪರೀಕ್ಷಾ ಕೇಂದ್ರಗಳು ಬದಲಾ­ದದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.ಸೋಮವಾರ ನಡೆದ ಡಿಪ್ಲೋಮಾ ಇನ್‌ ಜಿ.ಎನ್‌.ಎಂ. ಪರೀಕ್ಷೆ ಪಾರದರ್ಶ­ಕವಾಗಿ ನಡೆದಿಲ್ಲ. ಹೀಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಹೊರತುಪಡಿಸಿ ಇತರೆ ಕೇಂದ್ರಗಳಲ್ಲಿ ನಡೆದ ಪರೀಕ್ಷೆ­ಗಳನ್ನು ರದ್ದುಪಡಿಸಬೇಕು. ಹಾಗೂ ವೈದ್ಯಕೀಯ ಕಾಲೇಜಿನಲ್ಲೇ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪರೀಕ್ಷಾ ಅಕ್ರಮದ ಕುರಿತು ಸಿ.ಬಿ.ಐ. ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.­ಸೇನೆ ಜಿಲ್ಲಾ ಅಧ್ಯಕ್ಷ ಅವಿನಾಶ್‌ ದೀನೆ, ಕಾರ್ಯಾಧ್ಯಕ್ಷ ಸಾಯಿ ಶಿಂಧೆ, ಉಪಾ­ಧ್ಯಕ್ಷ ಪ್ರಭು ಮದರ್ಗಿಕರ್, ತಾಲ್ಲೂಕು ಅಧ್ಯಕ್ಷ ಸಂಜು ಲಕ್ಷ್ಮಿದೊಡ್ಡಿ, ನಗರ ಅಧ್ಯಕ್ಷ ಹರ್ಷವರ್ಧನ್ ವಾಲ್ದೊ­ಡ್ಡಿ, ಪ್ರಮುಖ ರಾದ ಕಲ್ಯಾಣ­ರಾವ್‌ ಗುನ್ನಳ್ಳಿಕರ್, ಪ್ರಭು, ರವೀಂ­ದ್ರ ಇ­ತ­ರರ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry