ಮಂಗಳವಾರ, ಮೇ 11, 2021
26 °C

ಅರೆ ತಲೆನೋವು: 12 ವಂಶವಾಹಿ ಸ್ಥಳ ಗುರುತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಅರೆ ತಲೆನೋವಿಗೆ ಸಂಬಂಧಿಸಿದ 12 ವಂಶವಾಹಿ ಇರುವ ಸ್ಥಳವನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಅರೆ ತಲೆನೋವಿಗೆ ಕಾರಣವಾಗುವ ಜೈವಿಕ ಅಂಶಗಳನ್ನು ಪತ್ತೆ ಹಚ್ಚಲು ಮತ್ತು ಈ ಸಂಬಂಧದ ಹೆಚ್ಚಿನ ಅಧ್ಯಯನಕ್ಕೆ ಇದು ನೆರವಾಗಲಿದೆ ಎಂದು ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳ ತಂಡ ಹೇಳಿಕೊಂಡಿದೆ.ಅರೆತಲೆನೋವಿಗೆ ಅವಕಾಶ ಮಾಡಿಕೊಡುವ ಒಟ್ಟು 12 ವಂಶವಾಹಿ ಸ್ಥಳಗಳನ್ನು ಗುರುತಿಸಲಾಗಿದ್ದು, ಇವುಗಳ ಪೈಕಿ ಎಂಟು ಸ್ಥಳಗಳು ಮಿದುಳಿನ ರಕ್ತ ಪರಿಚಲನಾ ವ್ಯೆಹ ಹಾಗೂ ನರವ್ಯೆಹಗಳನ್ನು ನಿಯಂತ್ರಿಸುವ ವಂಶವಾಹಿಗಳ ಬಳಿ ಪತ್ತೆಯಾಗಿವೆ. ಮಿದುಳಿನ ಅಂಗಾಂಶಗಳನ್ನು ಆರೋಗ್ಯವಾಗಿಡುವ ವಂಶವಾಹಿಗಳ ಬಳಿ ಮತ್ತೆರಡು ಸ್ಥಳಗಳು ಪತ್ತೆಯಾಗಿವೆ.

  

ಅರೆತಲೆನೋವು ಮನುಷ್ಯನನ್ನು ನಿತ್ರಾಣಗೊಳಿಸುವ ಒಂದು ರೋಗವಾಗಿದ್ದು, ಶೇ 14ರಷ್ಟು ವಯಸ್ಕರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅರೆತಲೆನೋವು ಉಂಟಾದಾಗ ಯಾವುದೇ ರೀತಿಯ ಜೈವಿಕ ಗುರುತು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಈ ರೋಗದ ಬಗ್ಗೆ ಅಧ್ಯಯನ ನಡೆಸುವುದು ಅಷ್ಟು ಸುಲಭವಲ್ಲ ಎಂದು ಅವರು ಹೇಳಿದ್ದಾರೆ. `ಈ ಅಧ್ಯಯನ ಅರೆತಲೆನೋವಿಗೆ ಸಂಬಂಧಿಸಿದಂತೆ ನಮ್ಮ ತಿಳಿವಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ' ಎಂದು ಸಂಶೋಧನೆಯಲ್ಲಿ ತೊಡಗಿರುವ ಬ್ರಿಟನ್‌ನ ವೆಲ್‌ಕಮ್ ಟ್ರಸ್ಟ್ ಸ್ಯಾಂಗರ್ ಇನ್‌ಸ್ಟಿಟ್ಯೂಟ್ ಡಾ. ಆರ್ನೊ ಪಾಲೋಟಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.