ಬುಧವಾರ, ಅಕ್ಟೋಬರ್ 16, 2019
21 °C

ಅರೆ ನಗ್ನ ನೃತ್ಯ: ಪ್ರಕರಣ ದಾಖಲು

Published:
Updated:

ಪೋರ್ಟ್ ಬ್ಲೇರ್(ಪಿಟಿಐ): ಪ್ರವಾಸಿಗರ ಎದುರು ಜರಾವಾ ಬುಡಕಟ್ಟು ಮಹಿಳೆಯರು ಅರೆ ನಗ್ನ ನೃತ್ಯ ಮಾಡಿದ ವಿಡಿಯೊ ದೃಶ್ಯಾವಳಿ ಪ್ರಸಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಐಪಿಸಿ,  ಮಾಹಿತಿ ಮತ್ತು ತಂತ್ರಜ್ಞಾನ ಕಾನೂನು, ಪರಿಶಿಷ್ಟ ಜಾತಿ, ಪಂಗಡಗಳ ಮತ್ತು ಆದಿವಾಸಿಗಳ ರಕ್ಷಣಾ ಕಾನೂನು ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ. 

ಡಿಎಸ್‌ಪಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದ್ದು, ಈ ವಿಡಿಯೊ ದೃಶ್ಯಾವಳಿ ಬಗ್ಗೆ ಕೇಂದ್ರೀಯ ಸೈಬರ್ ಅಪರಾಧ ವಿಭಾಗ ಸಹಕಾರ ನೀಡಲಿದೆ.

Post Comments (+)