ಗುರುವಾರ , ಫೆಬ್ರವರಿ 25, 2021
17 °C
ಮೂಡಿಗೆರೆ: ಕಾಫಿ ಸಂಶೋಧನಾ ಮಂಡಳಿಯ ತಜ್ಞರ ಭೇಟಿ

ಅರೇಬಿಕಾ ಕಾಂಡ ಕೊರಕ: ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರೇಬಿಕಾ ಕಾಂಡ ಕೊರಕ: ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

ಮೂಡಿಗೆರೆ: ಬಿಸಿಲು ಹೆಚ್ಚಾಗಿರುವ ಪರಿಣಾಮ ಮಲೆನಾಡಿನಲ್ಲಿ ಅರೇಬಿಕಾ ಕಾಫಿ ಬೆಳೆಗೆ ಬಿಳಿ ಕಾಂಡ ಕೊರಕ ಹುಳದ ಹಾವಳಿ ಹೆಚ್ಚಿದ್ದು, ಸೂಕ್ತ ಮುನ್ನೆಚ್ಚರಿಕೆ ಕಾಫಿ ಮಂಡಳಿ ಉಪ ನಿರ್ದೇಶಕ ಟಿ.ಸಿ.ಹೇಮಂತ್‌ಕುಮಾರ್‌ ತಿಳಿಸಿದರು.ತಾಲ್ಲೂಕಿನ ವಿವಿಧೆಡೆ ಅರೇಬಿಕಾ ಕಾಫಿಗೆ ಕಾಂಡಕೊರಕ ರೋಗ ಅತಿಕ್ರಮಿಸುತ್ತಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು, ತಾಲ್ಲೂಕು ಬೆಳೆಗಾರರ ಸಂಘ ಕಾಫಿ ಮಂಡಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ತಾಲ್ಲೂಕಿನ ದುಂಡುಗ ಎಸ್ಟೇಟ್‌ ಸೇರಿದಂತೆ ವಿವಿಧ ಕಾಫಿ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅರೇಬಿಕಾ ಕಾಫಿ ಬೆಳೆಗೆ ಬಿಸಿಲು ಹೆಚ್ಚಾದರೆ, ಬಿಳಿ ಕಾಂಡಕೊರಕ ರೋಗ ಹರಡುವ­ ಅಪಾಯ­ವಿದೆ. ಕಾಂಡಕೊರಕ ರೋಗ ಕಂಡು ಬಂದರೆ, ಮುಂದಿನ ಫಸಲಿನವರೆಗೆ ಕಾಯದೇ, ತಕ್ಷಣವೇ ಗಿಡವನ್ನು ಬುಡ ಸಹಿತ ತೆಗೆದು, ಸುಟ್ಟು­ಹಾಕಬೇಕು. ಕಾಂಡಕೊರಕ ಕೀಟದ ಹಾವಳಿ ನಿಯಂ­ತ್ರಿಸಲು, ಕಾಫಿ ಮಂಡಳಿಯಲ್ಲಿ ಸಹಾಯ­ಧನದಡಿಯಲ್ಲಿ ₨ 50 ಕ್ಕೆ ಮೋಹಕ ಬಲೆ (ಟ್ರಾಬ್‌) ನೀಡಲಾಗುತ್ತಿದ್ದು, ಎಕರೆಗೆ ಹತ್ತು ಮೋಹಕ ಬಲೆಗಳನ್ನು ಅಳವಡಿಸುವ ಮೂಲಕ ಕಾಂಡಕೊರಕ ರೋಗವನ್ನು ತಡೆಯ­ಬಹುದಾಗಿದೆ ಎಂದರು.ವಿವಿಧ ಕಾಫಿ ತೋಟಗಳಿಗೆ ಭೇಟಿ ನೀಡಿದ ತಜ್ಞರ ತಂಡ, ಬಿಳಿ ಕಾಂಡಕೊರಕ ರೋಗಕ್ಕೆ ತುತ್ತಾದ ಕಾಫಿ ಗಿಡಗಳನ್ನು ಕಡಿದು, ಗಿಡ­ದೊಳಗಿದ್ದ ಬಿಳಿ ಕೀಟವನ್ನು ಪ್ರದರ್ಶಿಸಿದರು. ಸ್ಥಳದಲ್ಲಿಯೇ ಬಿಳಿ ಕಾಂಡಕೊರಕ ರೋಗದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ, ನಿರ್ವಹಣೆಯ ಮಾಹಿತಿ­ಯಿರುವ ಕರಪತ್ರ ಹಂಚಿದರು.ಬಿಳಿ ಕಾಂಡ­ಕೊರಕ ರೋಗದ ಹಾವಳಿ, ನಿಯಂತ್ರಣಕ್ಕೆ ಕೈಗೊಳ್ಳ­ಬೇಕಾದ ಮಾಹಿತಿಯಿರುವ ಡಿವಿಡಿ ಡಿಸ್ಕ್‌ ಅನ್ನು ನೀಡಲಾಯಿತು. ಕಾಫಿ ಮಂಡಳಿ ಉಪ ನಿರ್ದೇಶಕ ಟಿ.ಸಿ.­ಹೇಮಂತ್‌­ಕುಮಾರ್‌, ಕೀಟ­ಶಾಸ್ತ್ರಜ್ಞ ಡಾ.ಎಚ್‌.­ಜಿ.­ಸೀತಾರಾಮ್‌, ಕಾಫಿ ಮಂಡಳಿ ಮೂಡಿಗೆರೆ ಘಟಕದ ಶ್ರೀನಾಥ್‌, ಸುರೇಂದ್ರಸ್ವಾಮಿ, ಕರ್ನಾ­ಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್‌.­ಜಯರಾಮ್‌ಗೌಡ, ಬಾಲಕೃಷ್ಣ, ದೇವರಾಜ್‌, ಎಸ್ಟೇಟ್‌ ಮಾಲೀಕ ಡಿ.ಎಸ್‌.ರವಿ ಮುಂತಾದವರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.