ಅರ್ಜಿ ಆಹ್ವಾನ

7

ಅರ್ಜಿ ಆಹ್ವಾನ

Published:
Updated:

ವಿಜಾಪುರ: ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದಿಂದ ನೀಡುವ ಡಾ.ಸೋಮಶೇಖರ ಮುನವಳ್ಳಿ ಮತ್ತು ಮಾಲತಿ ಮುನವಳ್ಳಿ ಹೆಲ್ತ್ ಅಂಡ್ ವೆಲ್‌ನೆಸ್ ಫೌಂಡೇಶನ್ (ಅಮೆರಿಕ) ಪ್ರಾಯೋಜಿತ   `ಈರಮ್ಮ ನಾಗಪ್ಪ ಮುನವಳ್ಳಿ  ಸಾಧಕಿ~ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.ಕರ್ನಾಟಕದಲ್ಲಿ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ 5 ಸಾವಿರ ರೂ.  ನಗದು ಮತ್ತು ಫಲಕ ಒಳಗೊಂಡಿದೆ.

ಇದೇ 28ಕ್ಕೆ 50 ವರ್ಷ ವಯಸ್ಸಿನೊಳಗಿನವರು ಪ್ರಶಸ್ತಿಗೆ ಅರ್ಹರು. ನಾಮನಿರ್ದೇಶನಗಳನ್ನು 28ರೊಳಗೆ ಅಧ್ಯಕ್ಷರು,  ಈರಮ್ಮ ನಾಗಪ್ಪ ಮುನವಳ್ಳಿ ಸಾಧಕಿ  ಪ್ರಶಸ್ತಿ ಆಯ್ಕೆ ಸಮಿತಿ, ಕುಲಸಚಿವರ ಕಾರ್ಯಾಲಯ, ಮಹಿಳಾ ವಿವಿ, ವಿಜಾಪುರ ಅವರಿಗೆ ಸಲ್ಲಿಸಲು ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry