ಅರ್ಜೆಂಟಿನಾ ರೈಲು ಅಪಘಾತ: 49 ಸಾವು

7

ಅರ್ಜೆಂಟಿನಾ ರೈಲು ಅಪಘಾತ: 49 ಸಾವು

Published:
Updated:

ಬ್ಯೂನಸ್ ಐರಿಸ್ (ಎಎಫ್‌ಪಿ): ಅರ್ಜೆಂಟಿನಾ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ಪ್ರಯಾಣಿಕರ ರೈಲೊಂದು ಬುಧವಾರ ರೈಲ್ವೆ ನಿಲ್ದಾಣದ  ಪ್ಲಾಟ್‌ಫಾರಂನ ಅಂತ್ಯದಲ್ಲಿ ಗೋಡೆಗೆ ಅಪ್ಪಳಿಸಿ ಕನಿಷ್ಠ 49 ಜನ ಸತ್ತಿದ್ದು, 675ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ನಗರದ ಹೊರವಲಯದ ನಿಲ್ದಾಣವೊಂದರಲ್ಲಿ ಈ ಘಟನೆ ನಡೆದಿದ್ದು ರೈಲಿನ ಬ್ರೇಕ್ ವಿಫಲವಾಯಿತು ಎನ್ನಲಾಗಿದೆ. ರೈಲು ಜನರಿಂದ ತುಂಬಿ ತುಳುಕುತ್ತ್ದ್ದಿದರಿಂದ ಅಪಘಾತದ ಪರಿಣಾಮ ಮತ್ತಷ್ಟು ಭೀಕರವಾಯಿತು.ಜನರ ಚೀರಾಟ, ತಳ್ಳಾಟ, ಚೆಲ್ಲಾಡಿದ ದೇಹಗಳು, ಹರಿದ ರಕ್ತದಿಂದಾಗಿ ಅಲ್ಲಿನ ಸನ್ನಿವೇಶ ಹೃದಯವಿದ್ರಾವಕವಾಗಿತ್ತು ಎಂದು ಪ್ರಯಾಣಿಕನೊಬ್ಬ ಹೇಳಿದ್ದಾನೆ. ಈ ದುರಂತದ ಹಿನ್ನೆಲೆಯಲ್ಲಿ ಸರ್ಕಾರ ಎರಡು ದಿನಗಳ ಶೋಕಾಚರಣೆಯ ಘೋಷಣೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry