ಸೋಮವಾರ, ನವೆಂಬರ್ 18, 2019
28 °C

ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ

Published:
Updated:

ಬೀದರ್: ನಗರದ ವಾರ್ಡ್ ಸಂಖ್ಯೆ 32 ರ ವ್ಯಾಪ್ತಿಯ ನಜರತ್ ಕಾಲೋನಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.ಕರ್ನಾಟಕ ಕಾಲೇಜು ಸಮೀಪ ಇರುವ ಕಾಲೊನಿಯಲ್ಲಿ ತಿಂಗಳ ಹಿಂದೆ ಚರಂಡಿ ಕಾಮಗಾರಿ ಆರಂಭಿಸಲಾಗಿದೆ. ಇದೀಗ ಅರ್ಧಕ್ಕೆ ಕೈಬಿಡಲಾಗಿದೆ ಎಂದು ನಾಗರಿಕರು ಆಪಾದಿಸಿದ್ದಾರೆ.ಚರಂಡಿಗಾಗಿ ಭೂಮಿ ಅಗೆದು ಹಾಗೆಯೇ ಬಿಟ್ಟಿದ್ದರಿಂದ ವಾಹನ ಸಂಚಾರ, ಮಕ್ಕಳು, ವೃದ್ಧರ ಓಡಾಕ್ಕೆ ಸಮಸ್ಯೆ ಆಗುತ್ತಿದೆ ಎಂದು ದೂರಿದ್ದಾರೆ. ಕೂಡಲೇ ಕಾಲೋನಿಯಲ್ಲಿ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.ಕಾಲೋನಿಯ ಡೇವಿಡ್ ಸ್ಯಾಮುಯೇಲ್, ಅಶೋಕಕುಮಾರ್, ತುಕಾರಾಮ ಮಾದಪ್ಪ, ಡೇವಿಡ್ ನಥಾನಿಯಲ್, ಮಾಣಿಕ, ಶರಣಪ್ಪ, ಸಂಜೀವ್, ಡ್ಯಾನಿಯಲ್ ಜಾನ್ ಸೇರಿದಂತೆ 26 ಜನ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಪ್ರತಿಕ್ರಿಯಿಸಿ (+)