ಭಾನುವಾರ, ಮೇ 16, 2021
22 °C

ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಕ್ಕೇರಿ: ತಾಲ್ಲೂಕಿನ ಇಸ್ಲಾಂಪುರ, ಶಹಾಬಂದರ, ಬಸ್ಸಾಪುರ, ಕರಗುಪ್ಪಿ ಮತ್ತು ಪಾಚ್ಚಾಪುರ ಗ್ರಾಮ ಪಂಚಾ ಯಿತಿಗಳ `ಗ್ರಾಮ ಸಭೆ~ ಕರೆದು ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿ ತಯಾರಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಿ ಪಡೆದು ಫಲಾನುಭವಿಗಳ ಆಯ್ಕೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು  ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ  ಸೂಚನೆ ನೀಡಿದರು.ಪಟ್ಟಣದಲ್ಲಿ ಸೋಮವಾರ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರಕಾರದ ವಿವಿಧ ಯೋಜನೆಗಳು ಅರ್ಹ ಫಲಾನು ಭವಿಗಳಿಗೆ ತಲುಪ ಬೇಕು.  ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಈ ದಿಸೆಯಲ್ಲಿ ಹೆಚ್ಚು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.ಅವಳಿ ಪಟ್ಟಣ (ಹುಕ್ಕೇರಿ- ಸಂಕೇಶ್ವರ)ಗಳ  ಕುಡಿಯುವ ನೀರಿನ ಸಮಸ್ಯೆ ಆಲಿಸಿದ ಸಚಿವರು ಬೇಸಿಗೆಯಲ್ಲಿ ಸಮಸ್ಯೆ ಇರುತ್ತದೆ.  ಮಳೆಗಾಲದಲ್ಲೇ  ನೀರಿನ ಸಮಸ್ಯೆಗೆ ಎದುರಾಗಲು ಕಾರಣವೇನು ಎಂದು ಪ್ರಶ್ನಿಸಿದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಆಯಾ ಭಾಗದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಟ್ಟಣ ಪಂಚಾಯಿತಿ ಮತ್ತು ಪುರಸಭೆ ಅಧ್ಯಕ್ಷರ  ಸಭೆ ನಡೆಸುವಂತೆ  ಕಾ.ಎಂಜಿನಿಯರ್ ಆರ್. ಕೆ. ನಿಂಗನೂರಿಗೆ ಸೂಚನೆ ನೀಡಿದರು.ಕುಡಿಯುವ ನೀರು ಪೂರೈಸಲು ವಿದ್ಯುತ್ ತೊಂದರೆ ಆಗುತ್ತಿದೆ ಎಂಬ ಸಮಸ್ಯೆಗೆ ಇದ್ದ ವ್ಯವಸ್ಥೆಯಲ್ಲಿ ಹೊಂದಾಣಿಕೆ ಮಡಿಕೊಳ್ಳವಂತೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿದರು. ನೆರೆಹಾವಳಿಯಲ್ಲಿ ಹಾನಿಗೀಡಾದ ಕೆಲ ಕುಟುಂಬಗಳಿಗೆ ಇನ್ನು ಪರಿಹಾರ ಸಿಗದೆ ಇರುವುದನ್ನು ಆಲಿಸಿದ ಸಚಿವರು ಬೇಗನೆ ಪರಿಹಾರ ವಿತರಿಸುವಂತೆ ಇಒ ಎಸ್.ಪಿ. ಪಾಟೀಲ ಮತ್ತು ತಹಸೀಲ್ದಾರ ಎ.ಐ.ಅಕ್ಕಿವಾಟೆ ಅವರಿಗೆ ಸೂಚಿಸಿದರು.ವಿತರಣೆ: ರಾಷ್ಟ್ರೀಯ ಸಾಮಾಜಿ ಭದ್ರತಾ ಯೋಜನೆ ಅಡಿ ತಲಾ ಹತ್ತು ಸಾವಿರದಂತೆ ಹುಲ್ಲೋಳಿಯ ಸರಿತಾ ಕುಚನೂರೆ, ಸುಮೀತ್ರಾ ಪಾಟೀಲ ಮತ್ತು ಸಾರಾಪುರದ ಪ್ರೇಮಾ ಕಾಂಬಳೆ ಅವರಿಗೆ ಸಚಿವರು ಪರಿಹಾರ ಧನದ ಚೆಕ್ ವಿತರಿಸಿದರು.ಜಿ.ಪಂ.ಸದಸ್ಯರಾದ ತನುಜಾ ಜಾಧವ, ಅಂಜನಾ ಹೆಬ್ಬಾಳಿ, ಶೋಭಾ ಮದಕರಿ, ಮುಕಬುಲ್‌ಸಾಬ ಮುಲ್ಲಾ, ಪರಶುರಾಮ ನಾಯ್ಕ, ತಾ.ಪಂ. ಸದಸ್ಯರಾದ ಸುಜಾತಾ ಜಾಗನೂರೆ, ಶಿವಾಜಿ  ಥಿಲಾರಿ, ಮಹಾನಿಂಗ ಸನದಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಗೌಡ ಪಾಟೀಲ, ತಾ.ಪಂ.  ಮಾಜಿ ಅಧ್ಯಕ್ಷ ಸತ್ಯಪ್ಪ ನಾಯಿಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪರಗೌಡ ಪಾಟೀಲ, ನಿರ್ದೇಶಕ ರಮೇಶ್ ಕುಲಕರ್ಣಿ,   ಗುರು ಕುಲಕರ್ಣಿ, ಹು.ಗ್ರಾ.ವಿ.ಸ.ಸಂಘದ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕ ಸುರೇಶ ದೊಡಲಿಂಗನವರ, ನೇರ್ಲಿ ಪಾಟೀಲ, ಅಮ್ಮಣಗಿ ಮಂಜರಗಿ, ಸುರೇಂದ್ರ ಇಮಗೌಡನವರ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.