ಗುರುವಾರ , ಮೇ 6, 2021
26 °C

ಅಲಕ್ಷಿತರಿಗೆ ಸಂದ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ನಮಗೇ ಬಂದಷ್ಟೇ ಖುಷಿ ತಂದಿದೆ. ಅವರ ಕಾವ್ಯ, ನಾಟಕ, ಕಾದಂಬರಿ, ಅವರ ನಡೆ ಮತ್ತು ನುಡಿ ನಾಡಿನ ಬಹು ಸಂಖ್ಯಾತ ಅಲಕ್ಷಿತ, ಮೌಖಿಕ, ದೇಶೀ ಪರಂಪರೆಗಳ ಪ್ರತಿನಿಧಿಗಳಾಗಿವೆ.ನಾಡಿನ ತಳಸಮುದಾಯಗಳ ಪುರಾಣ, ಚರಿತ್ರೆ, ಜಾನಪದ, ರಾಜಕಾರಣಗಳ ಸತ್ವ ಮತ್ತು ಸಂಕೇತಗಳನ್ನು ಕಂಬಾರರು ತಮ್ಮ ಬರಹಗಳಲ್ಲಿ ಅತ್ಯಂತ ಸೃಜನಶೀಲವಾಗಿ ಬಳಸಿದ್ದಾರೆ.

 

ಆ ಮೂಲಕ ದಲಿತ, ಹಿಂದುಳಿದ, ಅಲಕ್ಷಿತ ಸಮುದಾಯಗಳ ಮಾನವೀಯ ದನಿಯಾಗಿ ನಿಂತಿದ್ದಾರೆ. ಅಲಕ್ಷಿತರ ತಳ ಸಮುದಾಯಗಳ ಸಾಂಸ್ಕೃತಿಕ ಮೌಲ್ಯಗಳನ್ನು ಜಾತ್ಯತೀತವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಜಾಗತಿಕ ಮಟ್ಟದಲ್ಲಿ  ಎತ್ತಿ ಹಿಡಿದಿದ್ದಲ್ಲದೆ ವಿಸ್ತರಿಸಿದ್ದಾರೆ. ಆದ್ದರಿಂದ ಕಂಬಾರರಿಗೆ ಸಂದ ಜ್ಞಾನಪೀಠ ಪ್ರಶಸ್ತಿ ಬಹಳ ವರ್ಷಗಳ ನಂತರ ಕನ್ನಡ ನಾಡಿನ ಅಲಕ್ಷಿತ, ಮೌಖಿಕ, ದೇಶೀ ಸಮುದಾಯಗಳಿಗೆ ಮತ್ತು ಪರಂಪರೆಗಳಿಗೆ ಸಂದದ್ದಾಗಿದೆ. ಇದು ನಮ್ಮಂತಹ ಅಲಕ್ಷಿತ ಹಿಂದುಳಿದ ಸಮುದಾಯಗಳ ಸಂಭ್ರಮದ ಗಳಿಗೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.