ಅಲಹಾಬಾದ್: ಕಚ್ಛಾ ಬಾಂಬ್ ಸ್ಫೋಟ, ಇಬ್ಬರು ಮಕ್ಕಳು ಬಲಿ, ಮೂವರ ಸ್ಥಿತಿ ಗಂಭೀರ

7

ಅಲಹಾಬಾದ್: ಕಚ್ಛಾ ಬಾಂಬ್ ಸ್ಫೋಟ, ಇಬ್ಬರು ಮಕ್ಕಳು ಬಲಿ, ಮೂವರ ಸ್ಥಿತಿ ಗಂಭೀರ

Published:
Updated:
ಅಲಹಾಬಾದ್: ಕಚ್ಛಾ ಬಾಂಬ್ ಸ್ಫೋಟ, ಇಬ್ಬರು ಮಕ್ಕಳು ಬಲಿ, ಮೂವರ ಸ್ಥಿತಿ ಗಂಭೀರ

ಅಲಹಾಬಾದ್ (ಉ.ಪ್ರ) (ಐಎಎನ್ಎಸ್):  ಕಚ್ಛಾ ಬಾಂಬ್ ಒಂದು ಸ್ಫೋಟಿಸಿದ ಪರಿಣಾಮವಾಗಿ 8ರಿಂದ 10 ವಯೋಮಾನದ ಇಬ್ಬರು ಮಕ್ಕಳು ಮೃತರಾಗಿ ಇತರ 12ಕ್ಕೂ ಹೆಚ್ಚುಮಂದಿ ಗಾಯಗೊಂಡ ಘಟನೆ ನಗರದಲ್ಲಿ ಬುಧವಾರ ಘಟಿಸಿತು.



ಲಖನೌನಿಂದ 200 ಕಿ.ಮೀ. ದೂರದಲ್ಲಿರುವ ಅಲಹಾಬಾದ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ಮಕ್ಕಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಐಜಿಪಿ ಅಲೋಕ್ ಶರ್ಮಾ ಸುದ್ದಿ ಸಂಸ್ಥೆಗೆ ತಿಳಿಸಿದರು.



ಕಚ್ಛಾ ಬಾಂಬ್ ನ್ನು ಕರೀಲ್ಲಿ ಪ್ರದೇಶದಲ್ಲಿ ಕಸದ ಮಧ್ಯೆ ಅವಿತಿಡಲಾಗಿತ್ತು ಇಲ್ಲವೇ ಬಿಸಾಕಲಾಗಿತ್ತು. ಬಹುಶಃ ಅತಿಯಾದ ತಾಪದ ಪರಿಣಾಮವಾಗಿ ಅದು ಸ್ಫೋಟಗೊಂಡಿದೆ ಎಂದು ಗೃಹ ಇಲಾಖಾ ಮೂಲಗಳು ತಿಳಿಸಿವೆ.

ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಐಎಎನ್ ಎಸ್ ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry