ಅಲಿಯಾ ಅಲೆ

7

ಅಲಿಯಾ ಅಲೆ

Published:
Updated:
ಅಲಿಯಾ ಅಲೆ

ಥಳಕು ಬಳುಕಿನ ಸಿನಿಮಾ ಲೋಕಕ್ಕೆ ಈಗಷ್ಟೇ ಪದಾರ್ಪಣೆ ಮಾಡಿರುವ, ನಿರ್ದೇಶಕ ಮಹೇಶ್ ಭಟ್ ಪುತ್ರಿ ಅಲಿಯಾ ಭಟ್ ಕೈಯಲ್ಲಿ ಇದೀಗ ಸಾಕಷ್ಟು ಅವಕಾಶಗಳಿವೆಯಂತೆ.ಕರಣ್ ಜೋಹರ್ ನಿರ್ದೇಶನದ ಕೊನೆಯ ಚಿತ್ರ `ಸ್ಟೂಡೆಂಟ್ ಆಫ್ ದಿ ಇಯರ್'ನಲ್ಲಿ ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಶ್ರೀಮಂತ ಹುಡುಗಿ ಶಾನಿಯಾ ಪಾತ್ರದಲ್ಲಿ ಮಿಂಚಿದ್ದ ಅಲಿಯಾ ಇದೀಗ ಇನ್ನೊಂದು ಪ್ರಾಜೆಕ್ಟ್‌ನಲ್ಲಿ ತೊಡಗಿಕೊಂಡಿದ್ದಾರೆ.ಚೇತನ್ ಭಗತ್ ಅವರ ಜನಪ್ರಿಯ ಕಾದಂಬರಿ `2 ಸ್ಟೇಟ್ಸ್' ಆಧರಿಸಿದ ಚಿತ್ರದಲ್ಲಿ ಅಲಿಯಾ, ತಮಿಳು ಬ್ರಾಹ್ಮಣ ಹುಡುಗಿ ಅನನ್ಯಾ ಪಾತ್ರ ನಿರ್ವಹಿಸಲಿದ್ದಾರೆ. ಕರಣ್ ಜೋಹರ್ ಅವರೇ ಅಲಿಯಾಗೆ ಈ ಪಾತ್ರ ಕೊಡಿಸಿದ್ದಾರೆ ಎನ್ನಲಾಗಿದೆ.ಚೇತನ್ ಅವರು ಈ ಪಾತ್ರಕ್ಕೆ ಅಲಿಯಾ ಅವರನ್ನು ಆಯ್ಕೆ ಮಾಡಲು ಹಿಂದೇಟು ಹಾಕಿದ್ದರಂತೆ. ಆದರೆ ದಕ್ಷಿಣ ಭಾರತದ ಗೆಟಪ್‌ನಲ್ಲಿ ಅಲಿಯಾ ಫೋಟೊ ನೋಡಿದ ಮೇಲೆ ಅವರು ಮನಸ್ಸು ಬದಲಿಸಿದರಂತೆ.ಪಂಜಾಬಿ ಹುಡುಗ ಮತ್ತು ತಮಿಳು ಹುಡುಗಿಯ ಪ್ರೇಮಕಥನ ಚಿತ್ರದ ವಸ್ತು. ಹಾಗಾಗಿ ಪಂಜಾಬಿ ನಟ ಮತ್ತು ದಕ್ಷಿಣ ಭಾರತದ ನಟಿಯೇ ಕಥಾವಸ್ತುವಿಗೆ ಜೀವತುಂಬಿ ಸಿನಿಮಾವನ್ನು ಪರಿಪೂರ್ಣವಾಗಿಸಲು ಸಾಧ್ಯ ಎಂಬುದು ಚೇತನ್ ಭಾವನೆಯಾಗಿತ್ತು. ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಸೂಕ್ತ ಎಂದುಕೊಂಡಿದ್ದರು. ಆದರೆ ಅರ್ಜುನ್ ಕಪೂರ್ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾದಾಗ ಈ ನಿರ್ಧಾರ ಸ್ವಲ್ಪ ಸಡಿಲಗೊಂಡಿತು. ದೀಪಿಕಾ, ಅರ್ಜುನ್‌ಗೆ ಒಪ್ಪುವ ನಾಯಕಿ ಅಲ್ಲ ಎಂದು ತೀರ್ಮಾನಿಸಿ ಬೇರೆ ನಟಿಗೆ ಹುಡುಕಾಟ ಮುಂದುವರಿದಿತ್ತು.ನಂತರ ಕರಣ್, ಅಲಿಯಾಳನ್ನು ಆ ಪಾತ್ರಕ್ಕೆ ಸೂಚಿಸಿದರಂತೆ. ನಿರ್ಮಾಪಕರು ಫೋಟೊ ಶೂಟ್‌ನಲ್ಲಿ ಅಲಿಯಾಳನ್ನು ಕಂಡಾಕ್ಷಣ ಅತ್ಯಾಶ್ಚರ್ಯಗೊಂಡು ಅವರು ಈ ಪಾತ್ರಕ್ಕೆ ಪಕ್ಕಾ ರೀತಿಯಲ್ಲಿ ಹೊಂದುತ್ತಾರೆ ಎಂದು ಮಾತಾಡಿಕೊಂಡರಂತೆ.ಅರ್ಜುನ್ ಕಪೂರ್ ಅವರೊಂದಿಗೆ ಸಾಂಪ್ರದಾಯಿಕ ವಸ್ತ್ರ ಧರಿಸಿ, ಬಿಂದಿ ಇಟ್ಟುಕೊಂಡು ದಕ್ಷಿಣ ಭಾರತದವರಂತೆಯೇ ಮುಖಭಾವ ತೋರಿದ ಅಲಿಯಾ ಅಲ್ಲಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ದೀಪಿಕಾ ಕಳೆದುಕೊಂಡಿದ್ದು, ಅಲಿಯಾಗೆ ಲಾಭ ತಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry