ಭಾನುವಾರ, ಮೇ 16, 2021
22 °C

ಅಲೆಮಾರಿಗಳಿಗೆ ನಿವೇಶನ: ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತಾಲ್ಲೂಕಿನ ಅಗಸವಳ್ಳಿಯ ಗೌಳಿ ಕ್ಯಾಂಪ್‌ನ ಅಲೆಮಾರಿ ಜನಾಂಗದವರಿಗೆ ಸರ್ಕಾರ ಮಂಜೂರು  ಮಾಡಿರುವ ನಿವೇಶನ ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗೌಳಿ ಅಲೆಮಾರಿ ಜನಾಂಗದವರು ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಗುರುವರ ಪ್ರತಿಭಟನೆ ನಡೆಸಿದರು.ಗೌಳಿ ಕ್ಯಾಂಪ್‌ನ ಅಲೆಮಾರಿ ನಿವಾಸಿಗಳಿಗೆ ನಿವೇಶನ ನೀಡಲು, ಸರ್ಕಾರ ಗೌಳಿಕ್ಯಾಂಪ್‌ನಲ್ಲಿ ಸರ್ವೆ ನಂ. 167 ಪಿ-1 ರಲ್ಲಿ 2 ಎಕರೆ ಸರ್ಕಾರಿ ಭೂಮಿ ಮಂಜೂರು ಮಾಡಿದೆ. ಆದರೆ, ನಿವೇಶನಗಳನ್ನು ಗೌಳಿ ಜನಾಂಗದವರಿಗೆ ವಿತರಣೆ ಮಾಡಲು ಅಗಸವಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು, ಪಿಡಿಒ ಪ್ರತಿ ಫಲಾನುಭವಿಗಳಿಂದ ್ಙ 20 ಸಾವಿರ ಲಂಚ ಕೇಳುತ್ತ್ದ್ದಿದಾರೆ ಎಂದು ಆರೋಪಿಸಿದರು. ಕೂಡಲೇ ಅಧಿಕಾರಿಗಳ ಮೇಲೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ರಮ ಕೈಗೊಂಡು, ನಿವೇಶನ ಹಂಚಿಕೆ ಮಾಡಲು ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ನಾಗರಾಜ್, ಅಪ್ಪು, ತುಕಾರಾಮ್, ಬೈರೋಜಿ, ನಾಗರತ್ನಮ್ಮ, ಗಂಗಮ್ಮ, ಭಾಗ್ಯಮ್ಮ, ದೊಡ್ಡಮ್ಮ  ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ವಿ.ಕೆ. ಪಿಳ್ಳೈ ಭೇಟಿ   

ಭಾರತೀಯ ಸೇನೆ ಚೆನ್ನೈ ವಿಭಾಗದ ಲೆಫ್ಟಿನೆಂಟ್ ಜನರಲ್ ವಿ.ಕೆ. ಪಿಳ್ಳೈ ಮತ್ತು ಬೆಂಗಳೂರು ವಿಭಾಗದ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಎ.ಕೆ.ಸಿಂಗ್ ಅವರು ನಗರದ ಅಚ್ಯುತರಾವ್ ಲೇಔಟ್‌ನ ಸಿದ್ದೇಶ್ವರ ನಿಲಯದಲ್ಲಿರುವ ಇಸಿಎಚ್‌ಎಸ್ ಪಾಲಿಕ್ಲಿನಿಕ್‌ಗೆ ಜೂನ್ 7ರಂದು ಬೆಳಿಗ್ಗೆ 8.30ಕ್ಕೆ ಭೇಟಿ ನೀಡಿ, ಕ್ಲಿನಿಕ್‌ನ ಪ್ರಗತಿ ಪರಿಶೀಲಿಸುವರು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.