ಅಲೆಯ ಮೇಲೆ

7

ಅಲೆಯ ಮೇಲೆ

Published:
Updated:

ಕಿರಣ್‌ಕುಮಾರ್ ರೆಡ್ಡಿ ನಿರ್ಮಿಸುತ್ತಿರುವ `ಅಲೆ~ ಚಿತ್ರಕ್ಕಾಗಿ ಕವಿರಾಜ್ ರಚಿಸಿರುವ `ಸಾರಿ ಓ ಪೋರಿ ಸಾರಿ ಊದಿ ಕೆನ್ನೆ ಆಗೋಯ್ತು ಪೂರಿ~ ಎಂಬ ಹಾಡಿನ ಚಿತ್ರೀಕರಣ ಬೆಂಗಳೂರಿನ ಯುಬಿ ಸಿಟಿ, ಬೃಂದಾವನ ಕಾಲೇಜು ಹಾಗೂ ಇನ್ನೊವೇಟಿವ್ ಫಿಲಂ ಸಿಟಿಯಲ್ಲಿ ನಡೆದಿದೆ. ಕಲೈ ನೃತ್ಯ ನಿರ್ದೇಶನ ಮಾಡಿದ ಈ ಗೀತೆಗೆ ತನುಷ್ ಹಾಗೂ ಹರ್ಷಿಕಾ ಪೂಣಚ್ಚ ಹೆಜ್ಜೆ ಹಾಕಿದರು.ಆದತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿಜಯ್ ಭರಮಸಾಗರ ಸಂಭಾಷಣೆ ಬರೆದಿದ್ದಾರೆ. ಎ.ಕೆ.ಎನ್ ಸೆಬಾಸ್ಟೇನ್ ಛಾಯಾಗ್ರಾಹಣವಿದೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಬಾಬುಖಾನ್ ಕಲಾ ನಿರ್ದೇಶನ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry