ಅಲೆ ಅಲೆ ಅಲೆಯೋ...

7

ಅಲೆ ಅಲೆ ಅಲೆಯೋ...

Published:
Updated:

ಪೈರಸಿ, ಮೊಬೈಲ್‌ಫೋನ್, ಎಂಪಿ3 ಮುಂತಾದವುಗಳ ಹಾವಳಿಯ ನಡುವೆಯೇ ಹಾಡುಗಳ ಸೀಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ `ಅಲೆಮಾರಿ~ ಚಿತ್ರತಂಡ ಖುಷಿಯಾಗಿದೆ. ಯೋಗೀಶ್, ರಾಧಿಕಾ ಪಂಡಿತ್ ನಟಿಸಿರುವ, ಕಳೆದ ವಾರವಷ್ಟೇ ಬಿಡುಗಡೆಯಾದ `ಅಲೆಮಾರಿ~ ಆಡಿಯೊ ಸೀಡಿ ಭರದಿಂದ ಖರ್ಚಾಗುತ್ತಿದೆಯಂತೆ. ಎಫ್‌ಎಂ ಟೀವಿಗಳಲ್ಲಿಯೂ ಹಾಡುಗಳು ಮತ್ತೆ ಮತ್ತೆ ಪ್ರಸಾರವಾಗುತ್ತಿರುವುದು ಚಿತ್ರ ಗೆದ್ದಷ್ಟೇ ಸಂತಸದ ಅನುಭವವನ್ನು ನಿರ್ದೇಶಕ ಸಂತು ಅವರಿಗೆ ಉಂಟು ಮಾಡಿದೆಯಂತೆ.

ಧ್ವನಿಸುರುಳಿ ಜೊತೆಯಲ್ಲಿ ಹಾಡುಗಳ ಚಿತ್ರೀಕರಣದ ವಿಡಿಯೊ ಸೀಡಿಯನ್ನು ಉಚಿತವಾಗಿ ನೀಡಿರುವುದೂ ಹಾಡುಗಳ ಗೆಲುವಿಗೆ ಒಂದು ಕಾರಣ ಎಂಬುದು ಚಿತ್ರತಂಡದ ಅಭಿಪ್ರಾಯ.`ಅಲೆಮಾರಿ~ಯ ಗೀತೆಗಳ ಬಗ್ಗೆ ಒಳ್ಳೆ ಪ್ರತಿಕ್ರಿಯೆಯಿದ್ದರೂ, ಪೈರಸಿ ಸಮಸ್ಯೆ ಚಿತ್ರತಂಡಕ್ಕೆ ಬೇಸರ ತರಿಸಿದೆ. `ಅಧಿಕೃತವಾಗಿ ಆಡಿಯೊ ಬಿಡುಗಡೆ ಮಾಡಿದ ಒಂದು ಗಂಟೆಯೊಳಗೆ ಅದರ ನಕಲಿ ಸೀಡಿಗಳು ಹೊರಬರುತ್ತವೆ. ಅಲ್ಲದೆ `ಕಮಿಂಗ್ ಸೂನ್~ ಎಂಬ ಘೋಷಣೆಯನ್ನೂ ಮೊದಲೇ ಹಾಕಿರುತ್ತಾರೆ. ಹೀಗಾಗಿ ಇಂಥವರ ಮೇಲೆ ಕ್ರಮ ಕೈಗೊಂಡರೆ ಸ್ವಲ್ಪಮಟ್ಟಿಗಾದರೂ ಈ ದಂಧೆಗೆ ಕಡಿವಾಣ ಹಾಕಬಹುದು~ ಎನ್ನುವ ಸಂತು ಮಾತಿನಲ್ಲಿ ನೋವು ಇಣುಕುತ್ತದೆ.ಥಿಯೇಟರ್‌ಗಳಲ್ಲಿ `ಅಲೆಮಾರಿ~ ಬಗ್ಗೆ ಪ್ರಚಾರ ನಡೆಸುವ ಉದ್ದೇಶ ಚಿತ್ರತಂಡದ್ದು. ಅದಕ್ಕಾಗಿ ಥಿಯೇಟರ್ ಟ್ರೈಲರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಚಿತ್ರಮಂದಿರಗಳಿಗೆ ಬರುವ ಜನರನ್ನು ಆಕರ್ಷಿಸುವುದು ಇದರ ಗುರಿ. ಟ್ರೈಲರ್ ನೋಡಿಯೇ ಜನರಲ್ಲಿ ಚಿತ್ರದ ಬಗ್ಗೆ ಆಸಕ್ತಿ ಮೂಡಬೇಕು ಎನ್ನುವುದು ಚಿತ್ರತಂಡದ ಉದ್ದೇಶ. ಮಾರ್ಚ್ ಮೊದಲ ವಾರದಲ್ಲಿ ಅಲೆಮಾರಿ ತೆರೆಕಾಣಲಿದೆ. ಸುಮಾರು 100 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry