ಅಲ್ಟ್ರಾಬುಕ್ ಮಾರುಕಟ್ಟೆಗೆ

7

ಅಲ್ಟ್ರಾಬುಕ್ ಮಾರುಕಟ್ಟೆಗೆ

Published:
Updated:
ಅಲ್ಟ್ರಾಬುಕ್ ಮಾರುಕಟ್ಟೆಗೆ

ಬೆಂಗಳೂರು: ದೇಶದ ಎರಡನೆಯ ಅತಿ ದೊಡ್ಡ  ಐ.ಟಿ ಸೇವಾ ಸಂಸ್ಥೆ `ವಿಪ್ರೊ~ ಅತಿ ತೆಳ್ಳನೆಯ ಅಲ್ಟ್ರಾಬುಕ್ `ಇ-ಗೊ ಏರೊ~ವನ್ನು ಮಂಗಳವಾರ ಇಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  14 ಇಂಚಿನ ದೃಶ್ಯ ಪರದೆ ವಿಭಾಗದಲ್ಲಿ ಇದು ದೇಶದಲ್ಲಿಯೇ ಅತಿ ತೆಳ್ಳನೆಯ ಅಲ್ಟ್ರಾಬುಕ್ ಆಗಿದೆ. `ಇ-ಗೊ ಏರೊ~ ಮೂರು ಮಾದರಿಗಳಲ್ಲಿ ಲಭ್ಯವಿದ್ದು, ್ಙ 39 ಸಾವಿರದಿಂದ ್ಙ 49 ಸಾವಿರದವರೆಗೆ ದರ ನಿಗದಿಪಡಿಸಲಾಗಿದೆ. ಇಂಟೆಲ್ ಐ-5 ಪ್ರೊಸೆಸರ್,  4ಜಿಬಿ ರ‌್ಯಾಮ್, 500 ಜಿಬಿ ಹಾರ್ಡ್ ಡಿಸ್ಕ್, ವಿಂಡೋಸ್ 7 ಸೇರಿದಂತೆ ಹೊಸ ತಲೆಮಾರಿನ ತಂತ್ರಜ್ಞಾನ ವಿಶೇಷತೆಗಳು ಇದರಲ್ಲಿವೆ.`ಇ-ಗೊ ಏರೊ ಅಲ್ಟ್ರಾಬುಕ್ 19.3 ಮಿಲಿಮೀಟರ್‌ನಷ್ಟು ತೆಳ್ಳಗಿದ್ದು, 1.7 ಕೆ.ಜಿಯಷ್ಟು ಭಾರಹೊಂದಿದೆ. ಇನ್ನೆರಡು ಮಾದರಿಗಳಾದ `ಏರೊ ಆಲ್ಫಾ~ ಮತ್ತು `ಏರೊ ಬುಕ್~  1.4 ಕೆ.ಜಿ ತೂಗುತ್ತವೆ ಎಂದು ಸುದ್ದಿಗೋಷ್ಠಿಯಲ್ಲಿ ವಿಪ್ರೊ ಸಿಸ್ಟಂ    ಸ್ಸ್‌ನ ಮಾರುಕಟ್ಟೆ ಮುಖ್ಯಸ್ಥ ಅಶೋಕ್ ತ್ರಿಪಾಠಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry