ಅಲ್ಪಸಂಖ್ಯಾತರಿಗೆ ಅವಕಾಶ ನೀಡಿದಲ್ಲಿ ಪಾಕ್ ಸ್ಥಿರ : ಅಡ್ವಾಣಿ

7

ಅಲ್ಪಸಂಖ್ಯಾತರಿಗೆ ಅವಕಾಶ ನೀಡಿದಲ್ಲಿ ಪಾಕ್ ಸ್ಥಿರ : ಅಡ್ವಾಣಿ

Published:
Updated:

ನವದೆಹಲಿ (ಪಿಟಿಐ): ಪಾಕಿಸ್ತಾನ ತನ್ನ ದೇಶದ ಅಲ್ಪಸಂಖ್ಯಾತರಿಗೆ ಸೂಕ್ತ ಅವಕಾಶ ಕಲ್ಪಿಸಿದಲ್ಲಿ ಒಂದು ಸ್ಥಿರ ರಾಷ್ಟ್ರವಾಗಬಹುದು ಎಂದಿರುವ ಬಿಜೆಪಿ ಮುಖಂಡ ಎಲ್. ಕೆ. ಆಡ್ವಾಣಿ, ಅಲ್ಲಿನ ಶಾಸಕಾಂಗ ಮತ್ತು ರಾಜಕೀಯ ಬದುಕಿನ ಮೇಲೆ ಇಸ್ಲಾಂ ತತ್ವಗಳು ಭಾರೀ ಪ್ರಭಾವ ಬೀರಿವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.‘ಪಾಕಿಸ್ತಾನದಲ್ಲಿ ಇಸ್ಲಾಂ ತತ್ವಗಳು ಎಂದಿಗೂ ಜನಪ್ರಿಯವಾಗಿರಲಿಲ್ಲ, ಮಾತ್ರವಲ್ಲ, ಇಂದೂ ಅದು ಜನಪ್ರಿಯವಲ್ಲ ಎನ್ನುವುದನ್ನು ಚುನಾವಣೆಗಳು ಸಾಬೀತುಪಡಿಸಿವೆ. ಆದರೆ ದೇಶದ ಶಾಸಕಾಂಗ ಮತ್ತು ರಾಜಕೀಯ ಬದುಕಿನ ಮೇಲೆ ಅದು ಭಾರೀ ಪ್ರಭಾವವನ್ನು ಹೊಂದಿದೆ’ ಎಂದು ಅಡ್ವಾಣಿ ಅವರು ಪತ್ರಕರ್ತ ಎಂ. ಜೆ. ಅಕ್ಬರ್ ಅವರ ‘ಟಿಂಡರ್‌ಬಾಕ್ಸ್’ ಪುಸ್ತಕವನ್ನುದ್ದೇಶಿಸಿ ತಮ್ಮ ಹೊಸ ಬ್ಲಾಗ್‌ನಲ್ಲಿ ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry